ಲಕ್ನೋ: ಮಹಾತ್ಮಾ ಗಾಂಧಿ ಅವರು ಸಾಯುವ ಮುನ್ನ ʻಹೇ ರಾಮ್ʼ ಎಂದು ಘೋಷಣೆ ಕೂಗಿದ್ದರು. ಆ ಆದರ್ಶವನ್ನೇ ಕಾಂಗ್ರೆಸ್ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ರಾಯ್‌ಬರೇಲಿ ಕ್ಷೇತ್ರದ ʻಚೌಡಾ ಮಿಲ್ ವೃತ್ತದಲ್ಲಿʼ ಚುನಾವಣಾ ರ‍್ಯಾಲಿ ಉದ್ಧೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರ ಆದರ್ಶವನ್ನು ಕಾಂಗ್ರೆಸ್ ಅನುಸರಿಸುತ್ತದೆ. ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ತಿರಸ್ಕರಿಸಿದ ಕಾರಣಕ್ಕೆ ಮೋದಿ (PM Modi) ಕಾಂಗ್ರೆಸ್ ನ್ನು ಧರ್ಮ ವಿರೋಧಿ ಎಂದು ಆರೋಪಿಸುವುದು ತಪ್ಪು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮದ (Hindu Religion) ಚಾಂಪಿಯನ್, ಗೋ ರಕ್ಷಕರು ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಆದ್ರೆ ತಮ್ಮದೇ ಪಕ್ಷ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಗೋಶಾಲೆಗಳ ಸ್ಥಿತಿ ದಯನೀಯವಾಗಿದೆ. ಗೋ ಶಾಲೆಗಳಲ್ಲಿ (Cowsheds) ಸತ್ತಿರುವ ಹಸುಗಳ ಮಾಂಸವನ್ನು ನಾಯಿಗಳು ತಿನ್ನುತ್ತಿವೆ. ಅಷ್ಟೊಂದು ದಯನೀಯ ಸ್ಥಿತಿ ತಲುಪಿದೆ ಎಂದು ಆರೋಪಿಸಿದ್ದಾರೆ.
ಇಂಡಿಯಾ ಒಕ್ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಕೊಟ್ಟ ಭರವಸೆಗಳನ್ನು ಈಡೇರಿಸಲಿದೆ. ಉತ್ತರ ಪ್ರದೇಶದಲ್ಲಿ ಪದೇ ಪದೇ ಆಗುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆಗೆ ಬ್ರೇಕ್ ಹಾಕಲಿದೆ ಎಂದು ಹೇಳಿದ್ದಾರೆ.