ಸರ್ಕಾರವು ಶಕ್ತಿ ಯೋಜನೆ (Shakti Scheme) ಜಾರಿಗೆ ತಂದ ನಂತರ ಖಾಸಗಿ ಸಾರಿಗೆ (Private Transport)ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ.
ಈ ಸಮಸ್ಯೆಯನ್ನು ಬಗೆಹರಿಸುವಂತೆ ಖಾಸಗಿ ಸಾರಿಗೆ ಒಕ್ಕೂಟವು ಸರ್ಕಾರಕ್ಕೆ 10 ದಿನಗಳ ಗಡುವು ನೀಡಿತ್ತು. ಆದರೂ ಸರ್ಕಾರ ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್ಗೆ (Bengaluru Bandh) ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದೆ.
32 ಸಂಘಟನೆಗಳಿರುವ ರಾಜ್ಯದ ಖಾಸಗಿ ಸಾರಿಗೆ ಒಕ್ಕೂಟ ಸುದ್ದಿಗೋಷ್ಠಿ ನಡೆಸಿ ಬೆಂಗಳೂರು ಬಂದ್ ಮಾಡುವುದಾಗಿ ಹೇಳಿದೆ. ಆಟೋ, ಟ್ಯಾಕ್ಸಿ, ಏರ್ ಪೋರ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಕಾರ್ಪೋರೇಟ್ ವಾಹನಗಳು, ಸ್ಕೂಲ್ ಬಸ್ ಚಾಲಕರು, ಫ್ಯಾಕ್ಟರಿ ವಾಹನ, ಸ್ಟೇಜ್ ಗ್ಯಾರೇಜ್ ಬಸ್ ಗಳನ್ನು ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಒಕ್ಕೂಟ ಮುಂದಾಗಿದೆ. ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ, ಬೈಕ್, ರ್ಯಾಪಿಡ್ ಟ್ಯಾಕ್ಸಿಗಳ ಸಂಪೂರ್ಣ ನಿಷೇಧ ಸೇರಿದಂತೆ ಹಲವು ಬೇಡಿಕೆಗಳ ಈಜೇರಿಕೆಗಾಗಿ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ.