ಉಸಿರಾಟ ಸಂಬಂಧಿ ಕಾಯಿಲೆ ಪತ್ತೆ : ಬೆಂಗಳೂರಲ್ಲಿ ಡೋರ್ ಟು ಡೋರ್ ಸರ್ವೆ..!
ಬೆಂಗಳೂರು : ಬೆಂಗಳೂರು ನಗರ ಜಿಲ್ಲಾಡಳಿತದಿಂದ ಡೋರ್ ಟು ಡೋರ್ ಸರ್ವೆ ಆರಂಭವಾಗಿದೆ. ನಗರದಲ್ಲಿ 18,669 ಮಂದಿಗೆ ಉಸಿರಾಟ ಸಂಬಂಧೀ ಕಾಯಿಲೆ ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ 18,669 ಮಂದಿಗೆ ಈ ಉಸಿರಾಟ ಸಂಬಂಧೀ ರೋಗ ಲಕ್ಷಣ ಕಾಣಿಸಿಕೊಂಡಿದೆ. ಈ 18,669 ಮಂದಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿದಾಗ 1909 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ.. ಈ 1909 ಮಂದಿ ಪೈಕಿ 1602 ಮಂದಿಯನ್ನ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. 241 ಮಂದಿಯನ್ನ ಕೋವಿಡ್ ಕೇರ್ ಸೆಂಟರ್ಗೆ ಹಾಗೂ 66 ಮಂದಿಗೆ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಕೌಟುಂಬಿಕ ಕಲಹ – ವಿಷ ಸೇವಿಸಿ ಆತ್ಮಹತ್ಯಗೆ ಶರಣಾದ ನವವಿವಾಹಿತ
ಜೂನ್ 1 ರಿಂದ ಆಗಸ್ಟ್ 15 ರ ವರೆಗೆ ನಡೆದ ಸರ್ವೆಯಲ್ಲಿ ಇದು ಗೊತ್ತಾಗಿದೆ. ಸರ್ವೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗಯ ಕೇಂದ್ರದ ವೈದ್ಯರ ತಂಡ ಭಾಗಿಯಾಗಿತ್ತು. ಬೆಂಗಳೂರು ನಗರ ಜಿಲ್ಲೆಯ ಹೊರವಲಯದ ಬಿದರಹಳ್ಳಿಯಲ್ಲಿ ಅತ್ಯಧಿಕ 195 ಕೇಸ್ ಪತ್ತೆಯಾಗಿದೆ. ರಾಜಾನುಕುಂಟೆ 145, ಕೊಡತಿಯಲ್ಲಿ 139, ಕಾಲನಾಯಕನಹಳ್ಳಿ 138, ಮಂದಿ ರೋಗಿಗಳು ಪತ್ತೆಯಾಗಿದ್ದಾರೆ.. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ವೈದ್ಯರ ನಡೆ ಮನೆ ಬಾಗಿಲಿನ ಕಡೆ ಅಭಿಯಾನ ಆರಂಭವಾಗಿದೆ. ನಗರದ ಹೊರ ವಲಯದಲ್ಲೇ ಅತ್ಯಧಿಕ ಸಾರಿ ಕೇಸ್ ಪತ್ತೆಯಾಗಿದೆ. ಅಲ್ಲಿ ಜನಸಂಖ್ಯೆ ಕಡಿಮೆ ಇದ್ರೂ ಅತ್ಯಧಿಕ ಸಾರಿ ಐಎಲ್ಐ ಕೇಸ್ ಪತ್ತೆಯಾಗಿದ್ದು, ಈಗ ಪಾಲಿಕೆ ನಗರದ ಬಿಬಿಎಂಪಿ ವ್ಯಾಪ್ತಿಯ 29 ಲಕ್ಷ ಮನೆಯ ಸರ್ವೆ ಆರಂಭಿಸಿದೆ. ನಗರದ ವ್ಯಾಪ್ತಿಯಲ್ಲಿ ಲಕ್ಷಾಂತರ ಸಾರಿ ಐಎಲ್ಐ ಕೇಸ್ ಪತ್ತೆಯಾಗೋ ಸಾಧ್ಯತೆಯಿದೆ ಎನ್ನಲಾಗಿದೆ.








