Bengaluru : ಖತರ್ನಾಕ್ ಬೈಕ್ ಕಳ್ಳರ ಬಂಧನ
ಖತರ್ನಾಕ್ ಬೈಕ್ ಕಳ್ಳರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಅವರು ಮಾಹಿತಿ ನೀಡಿದ್ದಾರೆ..
ಜನವರಿ 22 ರಂದು ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ನಿವೃತ್ತ ಎ.ಎಸ್.ಐ ಅವರ ಬೈಕ್ ಕಳುವಾಗಿತ್ತು. ಮಾರ್ಕೆಟ್ ಠಾಣೆಯಲ್ಲಿ ಎ.ಎಸ್.ಐ ಆಗಿ ನಿವೃತ್ತರಾಗಿದ್ದವರ ಬೈಕ್ ಅನ್ನ ರೋಪಿಗಳು ಕದ್ದೊಯ್ದಿದ್ದರು. .
ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ.. ಆರೋಪಿಗಳಿಂದ ಒಟ್ಟು 20 ಬೈಕ್ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಓರ್ವ ಮೆಕಾನಿಕ್ ಗಿದ್ದ.. ಮತ್ತೊಬ್ಬ ಕಳ್ಳತನ ಮಾಡುವ ಬೈಕ್ ಟಾರ್ಗೆಟ್ ಮಾಡ್ತಿದ್ದ.
ನಂತರ ಇಬ್ಬರು ಜೊತೆಯಾಗಿ ಹೋಗಿ ಲಾಕ್ ಮುರಿದು ಕಳವು ಮಾಡ್ತಿದ್ರು. ಕದ್ದ ವಾಹನಗಳನ್ನ ಕುಣಿಗಲ್ ನಲ್ಲಿ ಇರಿಸ್ತಿದ್ರು,. ಕುಣಿಗಲ್ ನಲ್ಲಿ ನಂಬರ್ ಪ್ಲೇಟ್ ಚೇಂಜ್ ಮಾಡಿ ಬೆಂಗಳೂರಿಗೆ ಕರೆತರ್ತಿದ್ರು.
ಬೆಂಗಳೂರಲ್ಲಿ ಕಡಿಮೆ ಬೆಲೆಯಲ್ಲಿ ಬೈಕ್ ಮಾರಾಟ ಮಾಡ್ತಿದ್ರು ನ್ನಲಾಗಿದೆ.. ಒಟ್ಟು ಮೂವತ್ತರಿಂದ ಮೂವತ್ತೈದು ಲಕ್ಷ ಮೌಲ್ಯದ ಬೈಕ್ ಸೀಜ್ ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ..