ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊನ್ನೆ 196 ಮತ್ತು ನಿನ್ನೆ ಒಂದೇ ದಿನಕ್ಕೆ 126 ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲಿ ಪತ್ತೆಯಾಗಿವೆ. ಕೊರೊನಾ ನಿಯಂತ್ರಣ ಮಾಡಲು ಬಿಬಿಎಂಪಿ ಹರಸಾಹಸ ಪಟ್ಟು ಕೊನೆಗೆ ಮತ್ತೆ ಲಾಕ್ ಡೌನ್, ಸೀಲ್ ಡೌನ್ ಅಸ್ತ್ರ ಪ್ರಯೋಗಿಸಿದೆ.
ಬೆಂಗಳೂರಿನಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಕಲಾಸಿಪಾಳ್ಯ, ಕೆ,ಆರ್ ಮಾರ್ಕೆಟ್, ಚಿಕ್ಕಪೇಟೆ, ಚಾಮರಾಜಪೇಟ್ ಲಾಕ್ ಡೌನ್ ಮಾಡಲಾಗಿದೆ. ಇದರಿಂದಾಗಿ ಸದಾ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಕೆ.ಆರ್ ಮಾರ್ಕೇಟ್ ಇಂದು ಬಿಕೋ ಎನ್ನುತ್ತಿದೆ.
ಇಂದು ಬೆಳ್ಳಿಗೆಯಿಂದ ಲಾಕ್ ಡೌನ್ ಆಗಿರುವ ಕೆ,ಆರ್ ಮಾರ್ಕೆಟ್ ಕಂಪ್ಲೀಟ್ ಆಗಿ ಬಂದ್ ಆಗಿದೆ. ಇದರಿಂದಾಗಿ ಬೆಂಗಳೂರಿನ ಅತಿ ದೊಡ್ಡ ಮಾರುಕಟ್ಟೆ ಬಂದ್ ಆಗಿದೆ. ಅಲ್ಲದೆ ಇಡಿ ಕೆ,ಆರ್ ಮಾರ್ಕೆಟ್ ಮತ್ತು ಕಲಾಸಿಪಾಳ್ಯ ಪ್ರದೇಶದಲ್ಲಿ ಸ್ಯಾನಿಟೈಜ್ ಮಾಡಲಾಗುತ್ತಿದೆ. ಲಾಕ್ ಡೌನ್ ಬಗ್ಗೆ ಪರಿಶೀಲನೆ ನಡೆಸಲು ಬಿಬಿಎಂಪಿ ಮೇಯರ್ ಗೌತಮ್ ಕುಮಾರ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಸುತ್ತಮತ್ತಲಿನ ಪ್ರದೇಶಗಳಲ್ಲಿ ಸಂಚಾರಿಸಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಪರಿಶೀಲನೆ ನಡೆಸಿದರು.