ಬೀಗ ಹಾಕಿದ್ದ ಮನೆಗಳೇ ಟಾರ್ಗೇಟ್ – ಕಳ್ಳ ದಂಪತಿಗಳು ಅರೆಸ್ಟ್…
ಬೀಗ ಹಾಕಿದ್ದ ಮನೆಗಳನ್ನ ಪ್ಲಾನ್ ಮಾಡಿ ದೋಚುತ್ತಿದ್ದ ಖತರನಾಕ್ ದಂಪತಿಗಳನ್ನ ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಗರಾಜ್ ಮತ್ತು ರಮ್ಯ ಬಂಧಿತ ದಂಪತಿ. ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ದಂಪತಿಗಳು ಹಲವು ದಿನಗಳಿಂದ ಬೀಗ ಹಾಕಿದ್ದ ಮನೆಗಳನ್ನ ಟಾರ್ಗೇಟ್ ಮಾಡಿ ಕಳ್ಳತನಕ್ಕೆ ಇಳಿಯುತ್ತಿದ್ದರು.
ಮೈಸೂರು ಮೂಲದ ರಮ್ಯ ಮತ್ತು ಬೆಂಗಳೂರಿನ ಉತ್ತರಹಳ್ಳಿ ಮೂಲದ ನಾಗರಾಜ್ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ಬಳಿಕ ನಾಗರಾಜ್ ಮತ್ತು ರಮ್ಯ ಸೇರಿಕೊಂಡು ಕಳ್ಳತನ ಮಾಡಲು ಶುರು ಮಾಡಿದ್ದರು.
ಇಬ್ಬರು ಪ್ರಮುಖ ರಸ್ತೆಗಳಲ್ಲಿ ತಿರುಗಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡ್ತಿದ್ರು. ನಾಗರಾಜ್ ಕಳ್ಳತನ ಮಾಡಲು ಮನೆ ಒಳಗೆ ಹೋಗಿದ್ರೆ ರಮ್ಯ ಬಾಗಿಲಲ್ಲಿ ನಿಂತು ಕಾಯುತಿದ್ಲು. ಯಾರಾದ್ರು ಬಂದ್ರೆ ನಾಗರಾಜ್ಗೆ ಸಿಗ್ನಲ್ ಕೊಟ್ಟು ನಂತ್ರ ಸ್ಥಳದಿಂದ ಎಸ್ಕೇಪ್ ಆಗ್ತಿದ್ರು. ಕದ್ದ ಚಿನ್ನವನ್ನು ರಮ್ಯ ಅಡಮಾನ ಇಟ್ಟು ಹಣ ಪಡೆಯುತ್ತಿದ್ದರು. ಹೀಗೆ ಜೀವನ ನಡೆಸುತ್ತಿದ್ದ ಚಾಲಾಕಿ ಜೋಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.
ಜ್ಞಾನಭಾರತಿ ಠಾಣೆಯ ಪೊಲೀಸರು ಪ್ರಕರಣ ಭೇದಿಸಿದ್ದು, ಬಂಧಿತರಿಂದ ಐದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಮತ್ತು ವಾಹನಗಳು ವಶಕ್ಕೆ ಪಡೆಯಲಾಗಿದೆ.
Bengaluru : Locked houses are the target – thief couple arrested…