ಲಾಕಪ ಡೆತ್ ಆರೋಪ, ಪ್ರಕರಣಕ್ಕೆ ಟ್ವಿಸ್ಟ್ – ಸಾರ್ವಜನಿಕರ ಹಲ್ಲೆಯಿಂದ ಸಾವು…
ಮಕ್ಕಳ ಕಳ್ಳ ಎಂದು ಭಾವಿಸಿ ಸಾರ್ವಜನಿಕರಿಂದ ಥಳಿತಕ್ಕೊಳಗಾಗಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯ ಅಸಹಜ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದ್ದು ತನಿಖೆ ನಡೆಸಿದಾಗ ಹಲ್ಲೆಯಿಂದ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಿನಾಪುರ ನಿವಾಸಿಯಾಗಿರುವ ಪಾರ್ಥಿಬನ್, ಫಯಾಜ್ ಪಾಷ ಹಾಗೂ ಸಯ್ಯದ್ ಖಾಜಾ ಸೇರಿ ಮೂವರನ್ನು ಕೆ.ಆರ್. ಪುರಂ ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಮೃತ ಸಂಜಯ್ ಕಳೆದ ಎರಡು ವರ್ಷಗಳಿಂದ ರಾಮಮೂರ್ತಿನಗರದಲ್ಲಿ ವಾಸವಾಗಿದ್ದು ಗಾರೆ ಕೆಲಸ ಮಾಡಿಕೊಂಡಿದ್ದ. ಕಳೆದ ತಿಂಗಳು 23 ರಂದು ರಾಮಮೂರ್ತಿನಗರದಲ್ಲಿ ಅನುಮಾನಸ್ಪಾದವಾಗಿ ಓಡಾಡುತ್ತಿರುವುದನ್ನ ಕಂಡ ಸಾರ್ವಜನಿಕರು ಮಕ್ಕಳ ಕಳ್ಳ ಎಂದು ಭಾವಿಸಿ ಹಲ್ಲೆ ನಡೆಸಿದ್ದರು. ಬಳಿಕ 112ಗೆ ಕರೆಮಾಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ಸಂಜಯ್ ನನ್ನ ಠಾಣೆಗೆ ಕರೆದೋಯ್ದ ಪೊಲೀಸರು ಕೆಲ ಕಾಲ ವಿಚಾರಣೆ ನಡೆಸಿ ಬಿಟ್ಟಿದ್ದರು. ತಮ್ಮ ಮೇಲೆ ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಲು ನಿರಾಕರಿಸಿ ಸಂಜಯ್ ತೆರಳಿದ್ದ. ಮಾರನೇ ದಿನ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಐ ಕಾಲೋನಿ ಬಳಿ ಶವವಾಗಿ ಸಂಜಯ್ ಪತ್ತೆಯಾಗಿದ್ದ.
ಈ ಬೆಳವಣಿಗೆ ಕಂಡು ಪೊಲೀಸರೇ ಲಾಕಪ್ ಡೆತ್ ಮಾಡಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಕೆ.ಆರ್.ಪುರಂ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸಿದ ವಿಷಯ ಬೆಳಕಿಗೆ ಬಂದಿದೆ.
Bengaluru Lockup Death : Lockup death allegation, twist to the case – death due to attack by public…