ಸ್ನೇಹಿತೆಯ ಅಣ್ಣನ ರೂಪದಲ್ಲಿದ್ದ ಕಾಮಾಂಧ ರಾಕ್ಷಸ
ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ 20 ವರ್ಷದ ಯುವಕ ಮತ್ತು ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿರೊ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
15 ವರ್ಷದ ಬಾಲಕಿ ಅತ್ಯಾಚರಾವೆಸಗಿದ ಸಂಸತ್ರಸ್ತೆ. ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪಿ ಬಾಲಕಿಯ ಸ್ನೇಹಿತೆಯ ಅಣ್ಣನಾಗಿದ್ದಾನೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ, ತಾವು ಮಾಡಿದ ಅತ್ಯಾಚಾರವನ್ನು ಪೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.
ನಡೆದಿದ್ದೇನು ?: ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಾಲಕಿ ತನ್ನ ಸ್ನೇಹಿತೆಯ ಮನೆಗೆ ಹೋಗಿದ್ದಳು. ಆಗ ಸ್ನೇಹಿತೆ ಮನೆಯಲ್ಲಿ ಇರಲಿಲ್ಲ. ಆದರೆ ಸ್ನೇಹಿತೆಯ ರಾಕ್ಷಸ ಅಣ್ಣ ಮನೆಯಲ್ಲಿ ಇದ್ದು, ಇದೇ ವೇಳೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ತಾನು ಅತ್ಯಾಚಾರ ಮಾಡಿರುವುದನ್ನು ತನ್ನ ಪೋನ್ ನಲ್ಲಿ ಸೆರೆ ರೆಕಾರ್ಡ್ ಮಾಡಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದ ದೂರ್ಥ ಆ ವಿಡಿಯೋವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಆತನ ಸ್ನೇಹಿತರು ನಂತರ ಆ ವೀಡಿಯೋವನ್ನು ಇಟ್ಟುಕೊಂಡು ಆಕೆಗೆ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದಾರೆ. ಆಕೆಯಿಂದ ಹಣ ವಸೂಲಿ ಮಾಡಲು ಶುರು ಮಾಡಿದ್ದಲ್ಲದೇ, ಆಕೆಯನ್ನು ಬೆದರಿಸಲು ಮತ್ತು ಲೈಂಗಿಕವಾಗಿ ಬಳಸಿಕೊಳ್ಳಲು ಶುರು ಮಾಡಿದ್ದರು.
ಇದರಿಂದ ಬಾಲಕಿ ದಿನ ಕಳೆದಂತೆ ಖಿನ್ನತೆಗೆ ಒಳಗಾಗುತ್ತಿದ್ದಳು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸಂತ್ರಸ್ತೆ ತಾಯಿ ಮಗಳನ್ನು ಪ್ರಶ್ನಿಸಿದ್ದಾಳೆ. ಆದರೆ ಮಗಳು ಮೊದಲು ಬಾಲಕಿ ತನ್ನ ತಾಯಿ ಬಳಿ ಏನು ಹೇಳಿಲ್ಲ. ಆದರೆ ಅಮ್ಮ ಪದೇ ಪದೇ ಕೇಳಿದ್ದಕ್ಕೆ ನಡೆದ ಘಟನೆಯನ್ನು ಹೇಳಿದ್ದಾಳೆ.
ಈ ಹಿನ್ನಲೆಯಲ್ಲಿ ಏಪ್ರಿಲ್ 6 ರಂದು ತಾಯಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಸಂತ್ರಸ್ತೆ ತಾಯಿ ನೀಡಿದ ದೂರಿನ ಆಧಾರದ ಮೇಲೆ 8 ಮಂದಿ ಶಂಕಿತರ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.








