Crime: ಹೆಂಡತಿಯನ್ನು ನೋಡಿಕೊಳ್ಳಲು ಕಳತನವನ್ನು ಕಸಬಾಗಿಸಿಕೊಂಡ ಪತಿ

1 min read
Benagaluru Saaksha Tv

ಹೆಂಡತಿಯನ್ನು ನೋಡಿಕೊಳ್ಳಲು ಕಳತನವನ್ನು ಕಸಬಾಗಿಸಿಕೊಂಡ ಪತಿ

ಬೆಂಗಳೂರು: ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲು, ಮನೆಗಳಿಗೆ ಕನ್ನ ಹಾಕುತ್ತಿದ್ದ ಆಸಾಮಿಯನ್ನು ಗೋವಿಂದರಾಜನಗರ ಪೊಲೀಸರು ಕೈಗೆ ಕೋಳ ತೊಡಸಿದ್ದಾರೆ.

ಕೆ.ಆರ್.ಪುರ ನಿವಾಸಿ ಇಮ್ರಾನ್‌ ಪಾಷಾ (26) ಬಂಧಿತ ಆರೋಪಿ. ಸಧ್ಯ ಈತನ ಮೇಲೆ ಪ್ರಕರಣ ದಾಲಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ, ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲು ಕಳ್ಳತನ ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ.

ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಲು ತಪ್ಪು ಕೆಲಸಕ್ಕೆ ಕೈ ಹಾಕಿ ನಟೋರಿಯಸ್ ಕಳ್ಳನಾಗಿದ್ದಾನೆ. ಈತನಿಗೆ ಪತ್ನಿ ಹಾಗೂ‌ ಇಬ್ಬರು ಮಕ್ಕಳಿದ್ದು, ಹೆಂಡತಿ ಎಂದರೇ ಬಲು ಪ್ರೀತಿ. ಹಾಗಾಗಿ ಇಮ್ರಾನ್ ಪಾಷಾ ಕಳ್ಳತನ ಮಾಡಿ, ಪತ್ನಿಯನ್ನ ಖುಷಿಯಿಂದ ಸಾಕುತ್ತಿದ್ದ. ಅಷ್ಟೇ ಅಲ್ಲ ಕಳ್ಳತನ ಮಾಡಿಯೇ ಪತ್ನಿಯನ್ನ ಕಾಶ್ಮೀರಕ್ಕೂ ಕರೆದುಕೊಂಡು ಹೋಗಿದ್ದ.

ಈತ ಮನೆ ಬಾಗಿಲನ್ನ ರಾಡ್​ನಿಂದ ಮೀಟಿ ಮನೆಗಳ್ಳತನ ಮಾಡುತ್ತಿದ್ದ. ಈತನನ್ನು ಬಂಧಿಸಿದ ಪೊಲೀಸರು, ಆರೋಪಿಯಿಂದ 8 ಲಕ್ಷ 60 ಸಾವಿರ ಮೌಲ್ಯದ 147 ಗ್ರಾಂ ಚಿನ್ನಾಭರಣ ಮತ್ತು 1 ಕೆ.ಜಿ 517 ಗ್ರಾಂ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಹಿಂದೆ ಮಹದೇವಪುರ, ಅಶೋಕ್ ನಗರ, ಕೆ.ಆರ್. ಪುರಂ, ಮಾರತ್ ಹಳ್ಳಿ ಸೇರಿ ಒಟ್ಟು ಐದಾರಲೀಸ್​ ಸ್ಟೇಷನ್​​ಗಳ ವ್ಯಾಪ್ತಿಯಲ್ಲಿ ಆರು ಬಾರಿ ಕಳ್ಳತನ ಮಾಡಿದ್ದಾನೆ‌. ಆರೋಪಿ ಮೇಲ್ನೋಟಕ್ಕೆ ಗುಜರಿ ಕೆಲಸ ಮಾಡುತ್ತಿದ್ದರೆ, ಮೂಲ ಕಸಬಾಗಿ ಕಳ್ಳತನ ಮಾಡುತ್ತಿದ್ದ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd