ಆಸ್ತಿ ಆಸೆಗೆ ಹೆತ್ತ ತಾಯಿ ಕೊಲೆಗೆ ಮುಂದಾದ ಮಗ
ಹಣದ ಆಸೆಗೆ ಬಿದ್ದ ಮಗ ಹೆತ್ತ ತಾಯಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಮುಂದಾಗಿರುವ ಘಟಮ ಬೆಂಗಳೂರಿನಲ್ಲಿ ನಡೆದಿದೆ.
ಕೋಟ್ಯಾಂತರ ಮೌಲ್ಯದ ಆಸ್ತಿ ಕೊಟ್ಟಿದ್ದರೂ ಹಣದ ಆಸೆಯಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಾಯಿಯ ಮೇಲೆ ಜಾನ್ ಡಿ ಕ್ರೂಸ್ ಎಂಬ 65 ವರ್ಷದ ವ್ಯಕ್ತಿ ಹತ್ಯೆಗೆ ಮುಂದಾಗಿರುವ ಘಟನೆ ಆರ್ ಟಿ ನಗರದ ೨ನೇ ಬ್ಲಾಕ್ ನಲ್ಲಿ ನಡೆದಿದೆ.
88 ವರ್ಷದ ತಾಯಿ ಕ್ಯಾಥರಿನ್ ಡಿ ಕ್ರೂಸ್ ನಾಲ್ಕು ಜನ ಮಕ್ಕಳಲ್ಲಿ ಮೊದಲನೇಯವನು ಜಾನ್ ಡಿ ಕ್ರೂಸ್. ಉಳಿದ ಇಬ್ಬರು ಗಂಡು ಮಕ್ಕಳು ಅಮೆರಿಕಾದಲ್ಲಿ ವಾಸವಿದ್ದರೆ ಮಗಳು ಆಶ್ರಮದಲ್ಲಿದ್ದಾಳೆ. ಮೊದಲ ಮಗನ ಹೆಸರಿಗೆ ಆಸ್ತಿ ಬರೆದಿದ್ದ ಕ್ಯಾಥರಿನ್ ಗೆ ಹಲವು ಆರೋಗ್ಯ ಸಮಸ್ಯೆಗಳಿದ್ದವು. ಅಮೇರಿಕಾ ಮಗನ ಮೂಲಕ ಕೇರ್ ಟೇಕರ್ ಅವರು ಇವರನ್ನ ನೋಡಿಕೊಳ್ಳುತ್ತಿದ್ದರು. ಉಸಿರಾಟದ ಸಮಸ್ಯೆ ಹಿನ್ನಲೆ ಆಕೆಗೆ ನಿರಂತರ ಆಕ್ಸಿಜನ್ ಪೂರೈಕೆ ಅಗತ್ಯವಾಗಿತ್ತು.
ಜಾನ್ ಗೆ ಆಸ್ತಿ ಬರೆದು ಕೊಟ್ಟಿದ್ದರೂ ಬದುಕಿದ್ದ ತಾಯಿ ಮೇಲೆ ಕೋಪವಿತ್ತು. ಕಳೆದ ತಿಂಗಳ 29ರಂದು ಸಂಜೆ ಮನೆಗೆ ನುಗ್ಗಿದ ಜಾನ್, ಆನಾರೋಗ್ಯದಲ್ಲಿರುವ ತಾಯಿಯೊಂದಿಗೆ ಜಗಳ ತೆಗೆದಿದ್ದಾನೆ. ಈ ವೇಳೆ ಕೇರ್ ಟೇಕರ್ ಹೊರಗೆ ತಳ್ಳಿ ತಾಯಿ ಕೊಲೆಗೆ ಯತ್ನಿಸಿದ್ದಾನೆ. ಬಳಿಕ ತಾಯಿಗೆ ಅಳವಡಿಸಿದ್ದ ಆಕ್ಸಿಜನ್ ಪೈಪ್ ಕಿತ್ತು ಕೊಲೆ ಮಾಡಲು ಯತ್ನಿಸಿದ್ದಾನೆ.
ಕೂಡಲೇ ಪೊಲೀಸರಿಗೆ ಕೇರ್ ಟೇಕರ್ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಆರ್ ಟಿ ನಗರ ಪೊಲೀಸರು ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ ಕೇರ್ ಟೇಕರ್ ದೂರಿನ ಮೇರೆಗೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Bengaluru: Son attempt to kill mother for property in bengaluru R T nagar