ಬಿಎಚ್‌ಇಎಲ್‌ನಲ್ಲಿ ಖಾಲಿ ಹುದ್ದೆಗಳು: ಇಂಜಿನಿಯರ್ ಹಾಗೂ ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) 2025ನೇ ಸಾಲಿನ ನೇಮಕಾತಿಗೆ ಹೊಸ ಅಧಿಸೂಚನೆ ಪ್ರಕಟಿಸಿದೆ. ಹೈ ಪ್ರೆಶರ್ ಬಾಯ್ಲರ್ ಪ್ಲಾಂಟ್, ತಿರುಚಿರಪಳ್ಳಿಯಲ್ಲಿ ಕಾರ್ಯನಿರ್ವಹಿಸಲು ಒಟ್ಟು 20 ಹುದ್ದೆಗಳ ಭರ್ತಿಗೆ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳು ಜೂನ್ 11ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್ https://careers.bhel.in/index.jsp ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ.
ಯಾವ ಹುದ್ದೆಗಳಿಗೆ ನೇಮಕ?
BHEL ಪ್ರಕಟಿಸಿದ ಅಧಿಸೂಚನೆಯಂತೆ, ಖಾಲಿ ಇರುವ ಹುದ್ದೆಗಳ ವಿವರ ಹೀಗಿದೆ:
ಎಫ್ ಟಿ ಎ ಜಿಆರ್-2 (ಎಂಜಿನಿಯರ್ – ಕ್ವಾಲಿಟಿ): 10 ಹುದ್ದೆಗಳು
ಎಫ್ ಟಿ ಎ ಜಿಆರ್-3 (ಸೂಪರ್ ವೈಸರ್ – ಕ್ವಾಲಿಟಿ): 10 ಹುದ್ದೆಗಳು
ಯಾರು ಅರ್ಜಿ ಹಾಕಬಹುದು?
ಈ ಹುದ್ದೆಗಳಿಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಮೆಕ್ಯಾನಿಕಲ್ ಎಂಜಿನಿಯರಿಂಗ್ ಸೇರಿದಂತೆ ಸಂಬಂಧಿತ ಶಾಖೆಗಳ ಪದವಿ ಪಡೆದಿರಬೇಕು.
ವಯೋಮಿತಿ:
ಕನಿಷ್ಠ: 22 ವರ್ಷ
ಗರಿಷ್ಠ: 35 ವರ್ಷ
ಎಸ್ಸಿ/ಎಸ್ಟಿಗೆ 3 ವರ್ಷ, ಓಬಿಸಿ/ಜೆನರಲ್‌ಗೆ 5 ವರ್ಷದ ವಯೋಮಿತಿ ಸಡಿಲಿಕೆ ಇದೆ.
ಸಂಬಳ ಎಷ್ಟು?
ಎಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ₹84,000 ಸಂಬಳ ನೀಡಲಾಗುತ್ತದೆ.
ಸೂಪರ್ ವೈಸರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ₹45,000 ಸಂಬಳ ದೊರೆಯಲಿದೆ.
ಈ ಜತೆಗೆ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳೂ ಲಭ್ಯವಿರುತ್ತವೆ.
ಅರ್ಜಿ ಹೇಗೆ ಸಲ್ಲಿಸಬಹುದು?
ಅಭ್ಯರ್ಥಿಗಳು BHEL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಗದಿತ ಅರ್ಜಿ ನಮೂನೆಯ ಮೂಲಕ ಡಿಜಿಟಲ್ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಭರ್ತಿ ಮಾಡಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 11, 2025
ಈ ರೀತಿಯ ಹೆಚ್ಚಿನ ಉದ್ಯೋಗ ಸುದ್ದಿಗಳಿಗೆ ನಮ್ಮನ್ನು ಫಾಲೋ ಮಾಡಿ.








