Bharat Jodo Yatra : ಒಂದು ದಿನದ ವಿಶ್ರಾಂತಿ ನಂತರ ಪುನರಾರಂಭಗೊಂಡ ಭಾರತ್ ಜೋಡೋ ಯಾತ್ರೆ..
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಕೇರಳದ ಕೊಲ್ಲಂ ಜಿಲ್ಲೆಯ ಪೊಲಯಾಥೋಡು ಎಂಬಲ್ಲಿ ಒಂದು ದಿನದ ವಿಶ್ರಾಂತಿ ಪಡೆದ ನಂತರ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನ ನೂರಾರು ಪಕ್ಷದ ಕಾರ್ಯಕರ್ತರು ಮತ್ತು ಪಕ್ಷದ ಹಿರಿಯ ನಾಯಕರ ಜೊತೆಯಲ್ಲಿ ಪುನರಾರಂಭಿಸಿದ್ದಾರೆ.
ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್, ಸಂಘಟನೆಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಹಿರಿಯ ಕಾಂಗ್ರೆಸ್ ನಾಯಕರು, ರಮೇಶ್ ಚೆನ್ನಿತ್ತಲ, ಕೆ ಮುರಳೀಧರನ್, ಆರ್‌ಎಸ್‌ಪಿ ನಾಯಕ ಎನ್‌ಕೆ ಪ್ರೇಮಚಂದ್ರನ್ ಸೇರಿದಂತೆ ಇತರರು ರಾ ಗಾಂಧಿ ಅವರ ಜೊತೆಗೆ ನಡೆದಾಡಿದರು.
“ಒಂದು ದಿನದ ಉತ್ತಮ ವಿಶ್ರಾಂತಿಯ ನಂತರ, #BharatJodoYatra ಇಂದು ಬೆಳಿಗ್ಗೆ 6:45 ಕ್ಕೆ ಕೊಲ್ಲಂನಿಂದ ಪುನರಾರಂಭವಾಗಿದ್ದು. ಇಂದು ಬೆಳಿಗ್ಗೆ 13 ಕಿಮೀ ಕ್ರಮಿಸಿ ಕಡಲತೀರದ ನೀಂದಕರದಲ್ಲಿ ನಿಲ್ಲುತ್ತದೆ. ಗೋಡಂಬಿ ಕಾರ್ಮಿಕರು, ಗೋಡಂಬಿ ಉದ್ಯಮಿಗಳು, ಟ್ರೇಡ್ ಯೂನಿಯನ್ ಮತ್ತು RSP ಯ ಮುಖಂಡರೊಂದಿಗೆ ಸಂವಾದ ನಡೆಯಲಿದೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪಾದಯಾತ್ರೆಯನ್ನ ಪ್ರಾರಂಭಿಸಲಾಗಿದ್ದು, 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಮೂಲಕ ಯಾತ್ರೆ ಸಾಗಲಿದೆ.
ಸೆಪ್ಟೆಂಬರ್ 10 ರಂದು ಸಂಜೆ ಕೇರಳವನ್ನ ಪ್ರವೇಶಿಸಿದ್ದ ಭಾರತ್ ಜೋಡೋ ಯಾತ್ರೆಯು ಅಕ್ಟೋಬರ್ 1 ರಂದು ಕರ್ನಾಟಕವನ್ನ ಪ್ರವೇಶಿಸಲಿದೆ. ಇದಕ್ಕೂ ಮೊದಲು 19 ದಿನಗಳ ಅವಧಿಯಲ್ಲಿ ಏಳು ಜಿಲ್ಲೆಗಳ ಮೂಲಕ 450 ಕಿ.ಮೀ ಕ್ರಮಿಸಲಿದೆ.