Bhikshuki donated 9 lakhs- ದುಡ್ಡಿದ್ದೊರೆಲ್ಲ ದಾನಿಗಳಾಗಬೇಕೆಂದೇನಿಲ್ಲ ದಾನಿಗಳೆಲ್ಲ ದುಡ್ಡಿದೋರೆ ಆಗಬೇಕಿಲ್ಲ ಆದರೆ, ಇಲ್ಲೊಬ್ಬರು 80 ವರ್ಷದ ಭಿಕ್ಷುಕಿ ಯೋಬ್ಬಳು ಭಿಕ್ಷೆ ಬೇಡಿ ಬಂದ ಹಣವನ್ನ ಉಳಿಸಿ ಹಲವಾರು ದೇವಸ್ಥಾನಗಳಿಗೆ ಸುಮಾರು 9 ಲಕ್ಷ ರೂ ದೇಣಿಗೆ ನೀಡಿದ್ದಾಳೆ.
ಹೀಗೆ ಕುಂದಾಪುರ ತಾಲೂಕಿನ ಸಾಲಿಗ್ರಾಮದಲ್ಲಿ ವಾಸವಿದ್ದ 80 ವರ್ಷದ ವೃದ್ಧೆ ಅಶ್ವತ್ಥಮ್ಮ ಎಂಬುವರು ಹಲವು ವರ್ಷಗಳಿಂದ ದೇವಸ್ಥಾನದ ಟೋಲ್‌ಗೇಟ್ ಬಳೀ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಉಳಿಸಿ ದೇವಸ್ಥಾನಗಳಲ್ಲಿ ಅನ್ನದಾನ ಕಾರ್ಯಕ್ರಮಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ.
ಇವರು ಮೊದಲು ಗಂಡ, ಮಕ್ಕಳೊಂದಿಗೆ ಸಂಸಾರ ಸಾಗಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಗಂಡ, ಮಕ್ಕಳನ್ನು ಕಳೆದು ಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆ ಬಿಟ್ಟು ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದ ಬಳಿ ಭಿಕ್ಷೆ ಬೇಡಲು ಆರಂಭಿಸಿ, ದೇವಸ್ತಾನದಲ್ಲಿ ವಾಸವಾಗಿದ್ದರು .
ಅಯ್ಯಪ್ಪ ವ್ರತಧಾರಿಯಾಗಿ ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಹೋದಾಗ ಎರಿಮಲೆ ಪಂಪಾ ಸನ್ನಿಧಾನದಲ್ಲಿ ಅನ್ನದಾನಕ್ಕೆ ರು. 1.5 ಲಕ್ಷ ಕೊಡುಗೆ ನೀಡಿದ್ದಾರೆ.
ನಂತರ ಇದೆ ರೀತಿ ಗಂಗೊಳ್ಳಿಯ ದೇವಸ್ಥಾನಕ್ಕೆ 1 ಲಕ್ಷ,
ಕಂಚುಗೋಡು ಕುಂದಾಪುರ ದೇವಳಕ್ಕೆ 1 ಲಕ್ಷ,
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಅನ್ನದಾನಕ್ಕೆ 1 ಲಕ್ಷ,
ಪೊಳಲಿಯ ಅಖಿಲೇಶ್ವರಿ ದೇವಸ್ಥಾನಕ್ಕೆ 1 ಲಕ್ಷ ರೂ ದೇಣಿಗೆ ನೀಡಿದ್ದಾರೆ.
ಸೋಮವಾರ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನಕ್ಕೆ ಅನ್ನದಾನಕ್ಕೆಂದು 1 ಲಕ್ಷ ದೇಣಿಗೆಯಾಗಿ ನೀಡಿದ್ದಾರೆ.