Bidar breaking : ಕಾಲುವೆಯಲ್ಲಿ ಈಜಲು ತೆರಳಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು…
ಕಾರಂಜಾ ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಸಗಿರುವ ಘಟನೆ ಬೀದರನ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದ ಬಳಿ ನಡೆದಿದೆ.
ಕಟ್ಟಿತೂಗಾಂವ ಗ್ರಾಮದ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ಬಸವರಾಜ ಬುದೆ(18) ಹಾಗೂ ಕಣಜಿ ಗ್ರಾಮದ ಸಾಯಿನಾಥ್ ಸಂಗನಬಸೆಟ್ಟಿ (18) ಕಾರಂಜಾ ಕಾಲುವೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾರೆ.
ನಾಲ್ವರು ಯವಕರು ಈಜಾಡಲು ಕಾಲುವೆಗೆ ತರಳಿ ನೀರಿಗಿಳಿದಿದ್ದರು ಕಾರಂಜಾ ಜಲಾಶಯ ದಿಂದ ನೀರು ಬಿಟ್ಟ ಕಾರಣ ನೀರಿನ ಹರಿವು ಹೆಚ್ಚಾಗಿತ್ತು. ಬಂದಿದ್ದಾರೆ ಇಬ್ಬರೂ ಹೊರ ಬರದೆ ನೀರು ಪಾಲಾಗಿದ್ದಾರೆ.
ಸ್ಥಳಕ್ಕೆ ಧನ್ನೂರಾ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ಭೇಟಿ ಮೃತ ವಿದ್ಯಾರ್ಥಿಗಳ ಮೃತ ಶೋಧ ಕಾರ್ಯಚರಣೆ ಮುಂದುವರೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Bidar breaking : two student drowned in the canal in gadag








