BIGGBOSS 8 -ದಿವ್ಯಾಗೆ ಬಟ್ಟೆ ತೊಳೆದುಕೊಟ್ಟ ಅರವಿಂದ್..!
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳಂತೆ ಇರುವ ಜೋಡಿ ಅಂದ್ರೆ ಅದು ದಿವ್ಯಾ ಉರುಡುಗ ಮತ್ತು ಅರವಿಂದ್ ಅವರದ್ದು.. ಸದಾ ಒಟ್ಟಾಗಿ ಇರುತ್ತಾರೆ.. ಟಾಸ್ಕ್ ನಲ್ಲಿಯೂ ಒಟ್ಟಾಗಿರುತ್ತಾರೆ.. ಇಬ್ಬರ ಮಧ್ಯೆ ಇರುವ ಕನೆಕ್ಷನ್ ಸ್ಟ್ರಾಂಗ್ ಆಗಿದೆ. ಮೇಲ್ನೋಟಕ್ಕೆ ಸ್ನೇಹಿತರು ಅಂತ ಹೇಳಿಕೊಂಡ್ರು ಇಬ್ಬರ ಮಧ್ಯೆ ಪಕ್ಕಾ ಸಮ್ ಥಿಂಗ್ ಸಮ್ ಥಿಂಗ್ ನಡೀತಿದೆ ಅನ್ನೋದು ಮನೆಯ ಸದಸ್ಯರು ಪ್ರೇಕ್ಷಕರು ಮಾತು..
ಇವರಿಬ್ಬರ ನಡುವಿನ ಕ್ಯೂಟ್ ಕೆಮಿಸ್ಟ್ರಿ ಆಗಾಗ ಪ್ರೇಕ್ಷಕರನ್ನ ಸೆಲೆಯುತ್ತಲೇ ಇರುತ್ತೆ. ಕೆಲವು ದಿನಗಳಿಂದ ದಿವ್ಯಾ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಅರವಿಂದ್ ದಿವ್ಯಾ ಅವರ ಆರೈಕೆ ಮಾಡುತ್ತಿದ್ದಾರೆ. ನಿತ್ಯ ಊಟ ಹಾಗೂ ಮಾತ್ರೆ ತೆಗೆದುಕೊಳ್ಳುವ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ .ದಿವ್ಯಾ ಅವರ ಆರೈಕೆ ಮಾಡುತ್ತಿರುವ ಅರವಿಂದ್ ನಿನ್ನೆ ಅವರ ಬಟ್ಟೆ ಸಹ ತೊಳೆದುಕೊಟ್ಟಿದ್ದಾರೆ. ಅರವಿಂದ್ ಮಾಡಿದ ಕೆಲಸ ನೋಡಿದ ದಿವ್ಯಾ ಬೇಸರಗೊಂಡಿದ್ದಾರೆ. ಈ ಬಗ್ಗೆ ವೈಷ್ಣವಿ ಬಳಿ ಮಾತನಾಡಿದ ಉರುಡುಗ ಬೇಜಾರಾಗಿದ್ದಾರೆ. ಆಗ ಉರುಡುಗಗೆ ಸಮಾಧಾನ ಮಾಡಿರುವ ವೈಷ್ಣವಿ ಫ್ರೆಂಡ್ ತಾನೆ, ನೀನು ಯಾವಾಗದರೂ ಅವರ ಬಟ್ಟೆ ತೊಳೆದು ಕೊಡು ಎಂದಿದ್ದಾರೆ.