ಬಿಗ್ ಬಾಸ್ ಮೂಲಕ ಜನರನ್ನ ನಕ್ಕು ನಲಿಸಲಿದ್ಧಾರೆ ಮಜಾ ಭಾರತ ಖ್ಯಾತಿಯ ಪಾವಗಡ ಮಂಜು..!
ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. 10 ನೇ ಸ್ಪರ್ಧಿಯಾಗಿ ಮಜಾಭಾರತ ಖ್ಯಾತಿಯ ಕಾಮಿಡಿಯನ್ ಪಾವಗಡ ಮಂಜು ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮಜಾ ಬಾರತದಲ್ಲಿ ಯಾವ ರೀತಿ ಜನರನ್ನ ನಕ್ಕು ನಲಿಸಿದ್ದರೋ, ಬಿಗ್ ಬಾಸ್ ಮೂಲಕವೂ ಜನರನ್ನ ಅದೇ ರೀತಿ ಮನರಂಜಿಸಲು ಪಾವಗಡ ಮಂಜು ಸಜ್ಜಾಗಿದ್ದಾರೆ. ಇವರು ಯಲ್ಲಿಯವರು ಹಿನ್ನೆಲೆ ಏನು..?
ಬಿಗ್ ಬಾಸ್ ಗೆ ಬ್ರಹ್ಮಾಂಡವಾಗಿ ಎಂಟ್ರಿ ಕೊಟ್ಟ ಬ್ರಹ್ಮಗಂಟು ಗೀತಾ..!
ಮಜಾ ಭಾರತ ಖ್ಯಾತಿಯ ಕಿಲಾಡಿ ಪಾವಗಡ ಮಂಜು ಸತತ ಮೂರುವರೆ ವರ್ಷಗಳ ಕಾಲ ಮಜಾ ಭಾರತ ಶೋ ಮೂಲಕ ಜನರನ್ನ ರಂಜಿಸಿದ್ದರು. ಇದೀಗ ಸಿನಿಮಾಗಳಲ್ಲಿ ಬ್ಯುಸಿಯಾಗ್ತಿದ್ದಾರೆ. ‘ರಾಮಾರ್ಜುನ’ ಹಾಗೂ ಶಿವರಾಜ್ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾದಲ್ಲಿ ಮಂಜು ನಟಿಸಿದ್ದಾರೆ. ಏನಾದ್ರೂ ಸಾಧನೆ ಮಾಡೋ ಕನಸು ಹೊತ್ತು ಹಳ್ಳಿಯಿಂದ ಸಿಲಿಕಾನ್ ಸಿಟಿಗೆ ಬಂದಿದ್ದ ಮಂಜು ಮೊದಲಿಗೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಲೆ ಅನಿರೀಕ್ಷಿತವಾಗಿಯೋ ಅದೃಷ್ಟವೋ ಅವರಿಗೆ ‘ಮಜಾ ಭಾರತ’ ಶೋನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತು.