ನಾಮಿನೇಷನ್ ನಲ್ಲಿ ಶಂಕರ್ ಅಶ್ವಥ್ ಅವರೇ ಎಲ್ಲರ ಟಾರ್ಗೆಟ್ ಆಗಿದ್ಯಾಕೆ ..?
ಕಳೆದ ಭಾನುವಾರ ( ಫೆಬ್ರವರಿ. 28) ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದ ಬಿಗ್ ಬಾಸ್ ನಲ್ಲಿ ಸುದೀಪ್ ಅವರು 17 ಸ್ಪರ್ಧಿಗಳನ್ನ ಅದ್ಧೂರಿಯಾಗಿ ವೆಲ್ ಕಮ್ ಮಾಡಿ ಮನೆಯೊಳಗಡೆ ಕಳುಹಿಸಿಕೊಟ್ಟಿದ್ದಾರೆ.
100 ದಿನಗಳ ಆಟ ಇಂದು 3ನೇ ದಿನಕ್ಕೆ ತಲುಪಿದೆ. ವಾರದ ಎಲಿಮಿನೇಷನ್ ಗೆ ನಾಮಿನೇಷನ್ ಸಹ ನಡೆದಿದ್ದು, ಅತಿ ಹೆಚ್ಚು ಮತಗಳಿಂದ ನಾಮಿನೇಟ್ ಆದವರು ಮನೆಯ ಹಿರಿಯ ಸ್ಪರ್ಧಿ ಶಂಕರ್ ಅಶ್ವಥ್. ಮನೆಯ 11 ಸದಸ್ಯರು ಶಂಕರ್ ಅಶ್ವಥ್ ಅವರನ್ನ ನಾಮಿನೇಟ್ ಮಾಡಿದ್ದಾರೆ. ಎಲ್ಲರೂ ಒಂದೇ ಕಾರಣ ಕೊಟ್ಟಿದ್ದಾರೆ. ಆದ್ರೂ ಕ್ಯಾಪ್ಟನ್ ಬ್ರೋ ಗೌಡ ಅವರು ತಮ್ಮ ಪವರ್ ಬಳಸಿ ಅಶ್ವಥ ಅವರನ್ನ ಸೇಫ್ ಮಾಡಿದ್ದಾರೆ. ಆದ್ರೂ ಯಾಕೆ ಅವರನ್ನೇ ಎಲ್ಲರ ಟಾರ್ಗೆಟ್ ಆಗಿದ್ರು.
ಮೊದಲನೇ ದಿನ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಎಂದಿನಂತೆ ಒಬ್ಬಬ್ಬರೇ ಸದಸ್ಯರು ಕನ್ಫೆಶನ್ ರೂಮ್ ಗೆ ತೆರಳಿ ಸ್ಪರ್ಧಿಗಳನ್ನ ಎಲಿಮೇಷನ್ ಗೆ ಇಬ್ಬಿಬ್ಬರನ್ನ ನಾಮಿನೇಟ್ ಮಾಡಿದ್ರು. ಅದಕ್ಕೆ ಸೂಕ್ತ ಕಾರಣಗಳನ್ನ ಕೊಟ್ಟರು. ಅದ್ರಂತೆ ಮನೆಯ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಮಾಡಿದರು. ಒಟ್ಟು 6 ಜನರು ನಾಮಿನೇಟ್ ಆಗಿದ್ದರು. ಈ ಪೈಕಿ ಅತಿ ಹೆಚ್ಚು ಮತಗಳನ್ನ ಪಡೆದ ಸ್ಪರ್ಧಿ ಶಂಕರ್ ಅವರೇ ಆಗಿದ್ದರು. ಇದರಿಂದಾಗಿ ಶಂಕರ್ ಅವರು ಸ್ವಲ್ಪ ಬೇಸರಗೊಂಡಿದ್ದರು. ಅಂದ್ಹಾಗೆ ಎಲ್ಲರು ಕೊಟ್ಟ ಕಾರಣ ಕಾಮನ್ ಆಗಿತ್ತು.
2023ರ ವೇಳೆಗೆ ಲಾಂಚ್ ಆಗಲಿದೆ ಫೋಲ್ಡೇಬಲ್ ಐಫೋನ್..!
ಚಂದ್ರಕಲಾ ಮೋಹನ್, ಬೈಕ್ ರೇಸರ್ ಅರವಿಂದ್, ದಿವ್ಯಾ ಸುರೇಶ್, ಧನುಶ್ರೀ, ದಿವ್ಯ ಉರುಡಗ, ಗೀತಾ ಭಟ್, ಪ್ರಶಾಂತ್ ಸಂಬರ್ಗಿ, ಶುಭಾ ಪೂಂಜಾ, ವೈಷ್ಣವಿ ಗೌಡ, ರಘು ಗೌಡ, ವಿಶ್ವನಾಥ್ ಅವರು ಶಂಕರ್ ಅವರನ್ನು ನಾಮಿನೇಟ್ ಮಾಡಿದರು. ಈ ಸೀಸನ್ ನಲ್ಲಿರುವ ಸ್ಪರ್ಧಿಗಳಿಗೆ ಹೋಲಿಸಿಕೊಂಡರೆ ಶಂಕರ್ ಅವರು ಬಹಳ ಹಿರಿಯರು. ಟಾಸ್ಕ್ ಮಾಡುವ ಸಂದರ್ಭದಲ್ಲಿ ಶಂಕರ್ ಅವರಿಗೆ ಕಷ್ಟ ಅನಾರೋಗ್ಯದ ಸಮಸ್ಯೆ ಎದುರಾಗಬಹುದು ಎಂಬ ಕಾರಣಗಳನ್ನು ನೀಡಿ ನಾಮಿನೇಟ್ ಮಾಡಿದ್ದಾರೆ. ಬಹುತೇಕ ಮತಗಳು ಶಂಕರ್ ಅವರಿಗೆ ಬಂದಿದ್ರೂ ಕೊನೆ ಘಳಿಗೆಯಲ್ಲಿ ಅವರು ಸೇಫ್ ಆಗಿದ್ರು. ಕ್ಯಾಪ್ಟನ್ ಬ್ರೋ ಗೌಡ ಅವರು ಶಂಕರ್ ಅಶ್ವಥ್ ಅವರನ್ನ ಸೇಫ್ ಮಾಡಿದ್ದರು.
ಇನ್ನೂ ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ
ಮೊದಲನೇ ವಾರ ಡೇಂಜರ್ ಝೋನ್ ಗೆ ಐವರು ಹೋಗಿದ್ದಾರೆ. ಇವರ ಪೈಕಿ ನಿರ್ಮಲಾರನ್ನ ಆಟದಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದ್ದರು. ಉಳಿದಂತೆ ಮೊದಲನೇ ದಿನ ನಾಮಿನೇಟ್ ಆಗಿದ್ದ ಪ್ರಶಾಂತ್ ಸಂಬರ್ಗಿ ಹಾಗೂ ಪಾವಗಡ ಮಂಜು 2ನೇ ದಿನ ಬಿಗ್ ಬಾಸ್ ಕೊಟ್ಟ ಟ್ವಿಸ್ಟ್ ನಿಂದ ಸೇಫ್ ಝೋನ್ ಗೆ ತೆರಳಿದ್ದರು. ಆಟದಲ್ಲಿ ವಿಶ್ವನಾಥ್ ನನ್ನ ಸೋಲಿಸಿ ಪ್ರಶಾಂತ್ ಸೇಫ್ ಆಗಿ ವಿಶ್ವನಾಥ್ ಅವರನ್ನ ನಾಮಿನೇಟ್ ಮಾಡಿದ್ರೆ, ಇತ್ತ ಪಾವಗಡ ಮಂಜು ಸಹ ರಘುನನ್ನ ಸೋಲಿಸಿ ಅವರನ್ನ ನಾಮಿನೇಟ್ ಮಾಡಿ ತಾವು ಬಚಾವಾಗಿದ್ದರು. ಸದ್ಯಕ್ಕೆ ರಘು, ನಿರ್ಮಲಾ, ವಿಶ್ವನಾಥ್, ಧನುಶ್ರೀ, ನಿಧಿ ಸುಬ್ಬಯ್ಯ ಡೇಂಜರ್ ಝೋನ್ ನಲ್ಲಿದ್ದು, ಈ ಐವರಲ್ಲಿ ಮೊದಲನೇ ವಾರವೇ ಬಿಗ್ ಬಾಸ್ ಮನೆಯಿಂದ ಆಚೆ ಕಾಲಿಡೋರು ಯಾರು ಎನ್ನುವುದು ವೀಕೆಂಡ್ ನಲ್ಲಿ ಗೊತ್ತಾಗಲಿದೆ.