‘ಮೊಗ್ಗಿನ ಮನಸ್ಸಿ’ನ ಹುಡುಗಿ ಶುಭಾ ಬಿಗ್ ಬಾಸ್ ನಲ್ಲಿ ಕಮಾಲ್ ಮಾಡ್ತಾರಾ..!
ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. ಹಾಗಾದ್ರೆ ಮನೆಗೆ ಎಂಟ್ರಿಯಾದ 2ನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ಶುಭಾ ಪುಂಜಾ ಜನರಿಗೆ ಚಿರಪರಿಚಿತ. ಸ್ಯಾಂಡಲ್ ವುಡ್ ನಟಿ, ಮೊಗ್ಗಿನ ಮನಸ್ಸು, ಚಂಡ, ತಾಕತ್ ನಂತಹ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿರುವ ಶುಭಾ ಪುಂಜಾ ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಡಿಮೆಯೇ. ಅಲ್ಲದೇ ಸಿನಿಮಾರಂಗದಲ್ಲಿ ಅಷ್ಟಾಗಿ ಅವರಿಗೆ ಬೇಡಿಕೆಗಳು ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಂದ್ರೆ ಬಣ್ಣದ ಜಗತ್ತಿನಿಂದ ಶುಭಾ ನಿಧಾನವಾಗಿ ಮಾಯವಾಗುತ್ತಿದ್ದ ಹೊತ್ತಲ್ಲೇ ಅವರಿಗೆ ಅದೃಷ್ಟ ಖುಲಾಯಿಸಿದೆ. ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಅವರಿಗೆ ಒಂದು ಬಿಗ್ ಪ್ಲಾಟ್ ಪಾರ್ಮ್ ಆಗಿದ್ದು, ಶೋ ಮೂಲಕ ಜನರನ್ನ ರಂಜಿಸಲು ಸಿದ್ಧರಾಗಿದ್ದಾರೆ ಶುಭಾ. ಅಂದ್ಹಾಗೆ ಶುಭಾ ಪುಂಜಾಗೆ ಈ ಮೊದಲು ನಡೆದ 7 ಸೀಸನ್ ಗಳಲ್ಲೂ ಆಫರ್ ಗಳು ಸಿಕ್ಕಿದ್ದವಂತೆ. ಆದ್ರೆ ಆಗ ಅವರು ಈ ಆಫರ್ ಗಳನ್ನ ತಿರಸ್ಕರಿಸಿದ್ದರಂತೆ. ಆದ್ರೆ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಆಗಿದ್ದಾರೆ.