BIGGBOSS 8 : ದೊಡ್ಮನೆಯಲ್ಲಿ ವಿಶ್ವನ ದರ್ಬಾರ್ ಶುರು.! ಕುದುರೆ ಅಂದ್ರೆ ಅಶ್ವ… ಕ್ಯಾಪ್ಟನ್ ಅಂದ್ರೆ ವಿಶ್ವ..!
ಈ ಬಾರ ಬಿಗ್ ಬಾಸ್ ಅರವಿಂದ್ ರನ್ನ ಬಿಟ್ಟು ಮನೆ ಮಂದಿಯನ್ನೆಲ್ಲಾ ಡೇಂಜರ್ ಝೋನ್ ಗೆ ತಳ್ಳಿದ್ದರು. ಆದ್ರೆ ಮನೆಯ ಕಿರಿಯ ಸದಸ್ಯ ಇದೀಗ ಸೇಫ್ ಆಗಿ ಡೇಂಜರ್ ನಿಂದ ಹೊರ ಬಂದಿದ್ದಾರೆ. ಹೌದು ಮನೆಯ ಕ್ಯಾಪಟ್ನ್ ಆಗಿ ಆಯ್ಕೆಯಾಗಿರುವ ಅತ್ಯಂತ ಕಿರಿಯ ಸದಸ್ಯ ವಿಶಧ್ವ ಈಗ ಮನೆಯಲ್ಲಿ 1 ವಾರ ದರ್ಬಾರ್ ನಡೆಸಲಿದ್ದಾರೆ. ಮನೆಯ ಕಿರಿಯ ಸದಸ್ಯ ಅಂತ ಯಾವಾಗಲೂ ವಿಶ್ವನಾಥ್ ನನ್ನ ಮನೆ ಮಂದಿ ಡಿ ಗ್ರೇಡ್ ಮಾಡ್ತಿದ್ದರು. ಹಗುರವಾಗಿ ತೆಗೆದುಕೊಳ್ತಿದ್ದರು. ಈಗ ವಿಶ್ವ ತಾನೇನು ಅನ್ನೋದನ್ನ ಪ್ರೋವ್ ಮಾಡಿದ್ದಾನೆ.
ಬಿಗ್ ಬಾಸ್ ನೀಡಿದ್ದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಚದುರಂಗ ಆಟವಾಡಿ ಬಿಳಿ ತಂಡ ಗೆದ್ದಿತ್ತು. ಈ ಬಳಿಕ ಗೆದ್ದ ತಂಡದ ಸಸದ್ಯರಿಗೆ ಶಬ್ದವೇದಿ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಪ್ರಕಾರ ಒಂದಷ್ಟು ಪ್ರಾಣಿಗಳ ಶಬ್ದ ಕೇಳಿ ಜೋಡಿಸಬೇಕಿತ್ತು. ಈ ವೇಳೆ ವಿಶ್ವನಾಥ್ 2 ಸುತ್ತುಗಳಲ್ಲಿ ಸರಿಯಾಗಿ ಜೋಡಿಸುವ ಮೂಲಕ ಟಾಸ್ಕ್ ಗೆದ್ದು 4ನೇ ವಾರದ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ಇದಕ್ಕೆ ಪ್ರತಿಕ್ರಿಯಿಸಿರುವ ರಘು ‘ಕದುರೆ ಎಂದರೆ ಅಶ್ವ, ಕ್ಯಾಪ್ಟನ್ ಅಂದ್ರೆ ವಿಶ್ವ’ ಎಂದು ಹೊಗಳಿದ್ದಾರೆ.
RRR ಸಿನಿಮಾದಿಂದ ಸ್ಟಾರ್ ನಟಿಯನ್ನ ಕೈಬಿಟ್ಟಿದ್ದೇಕೆ ರಾಜಮೌಳು – ಯಾರು ಆ ನಟಿ..?
NETFLIX , AMAZON ಸೇರಿ ಹಲವು ಒಟಿಟಿಗಳ ಮೇಲಿನ ಬಾಕಿ ಕೇಸ್ ಗಳಿಗೆ ತಡೆ ನೀಡಿದ ಸುಪ್ರೀಂ..!