BIGGBOSS 8 – ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡ ಟಿಕ್ ಟಾಕ್ ಸ್ಟಾರ್ ಧನುಶ್ರೀ..!
ಬಿಗ್ ಬಾಸ್ ಸೀಸನ್ 8 ಕ್ಕೆ ಆಗಮಿಸಿ ಒಂದೇ ವಾರಕ್ಕೆ ಎಲಿಮಿನೇಟ್ ಆದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಬಿಗ್ ಬಾಸ್ ಮುಗಿದ ನಂತರ ಏನು ಮಾಡಿಕೊಂಡಿದ್ದಾರೆ. ಯಾವುದಾದರೂ ಸಿನಿಮಾ ಆಫರ್ ಗಳು ಸಿಕ್ಕಿದ್ಯಾ ಹೀಗೆಲ್ಲಾ ಪ್ರಶ್ನೆಗಳು ಕೆಲವರನ್ನ ಕಾಡ್ತಿದೆ. ಅಂದ್ಹಾಗೆ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ಧನುಶ್ರೀಗೆ ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎನ್ನಲಾಗಿದೆ.
ಆದ್ರೆ ಧನುಶ್ರೀ ಸದ್ಯ ಫೋಟೋ ಶೂಟ್ ಹಾಗೂ ವಿಡಿಯೋ ಮಾಡೋದ್ರಲ್ಲಿಯೇ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಗ್ಲಾಮರಸ್ ಹಾಗೂ ಹಾಟ್ ಲುಕ್ ನಲ್ಲಿ ಧನುಶ್ರೀ ಫೋಟೋ ಶೂಟ್ ಮಾಡಿಸಿದ್ದು, ಈ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರೆಡ್ ಫ್ರಾಕ್ ನಲ್ಲಿ ತರಹೇವಾರಿ ಫೋಸ್ ಕೊಟ್ಟು ಫೋಟೋಗಳನ್ನ ತೆಗೆಸಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಗಳನ್ನಮಾಡುತ್ತಾಯಿದ್ದಾರೆ.