BIGGBOSS 8 : ಬಿಗ್ ಬಾಸ್ ಕೊಟ್ಟ ಶಿಕ್ಷೆಗೆ ಸಾಕ್ ಆದ ವೈಷ್ಣವಿ – ಡ್ಯಾನ್ಸ್ ಮಾಡುದ್ರೆ ಮಾತ್ರ ನೀರು..!
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಒಂದು ವಿಭಿನ್ನವಾದ ವ್ಯಕ್ತಿತ್ವದೊಂದಿಗೆ ಗುರುತಿಸಿಕೊಂಡಿರುವ ವೈಷ್ಣವಿ ಬಿಗ್ ಬಾಸ್ ಮನೆಯಲ್ಲಿ ಸದಾ ಜವಾಬ್ದಾರಿಯುತವಾಗಿ ನಡೆದುಕೊಳ್ತಾರೆ. ಆದ್ರೆ ಇತ್ತೀಚಗೆ ಒಂದು ಗಾಜಿನ ಬೌಲ್ ಒಡೆದುಹಾಕಿ ಬಿಗ್ ಬಾಸ್ ಕೊಟ್ಟ ಶಿಕ್ಷೆಗೆ ಗುರಿಯಾಗಿದ್ದಾರೆ.
ವೈಷ್ಣವಿ ಗಾಜಿನ ಬೌಲ್ ಒಡೆದು ಹಾಕಿದ್ದಕ್ಕೆ ಬಿಗ್ ಬಾಸ್ ವೈಷ್ಣವಿಗೆ ಒಂದು ವಿಚಿತ್ರ ಶಿಕ್ಷೆ ಕೊಟ್ಟಿದ್ದಾರೆ. ಬಿಗ್ ಬಾಸ್ ನೀಡಿರುವ ಶಿಕ್ಷೆಯನ್ನ ವೈಷ್ಣವಿಗೆ ಪ್ರಸಾಂತ್ ಸಂಬರಗಿ ವಿವರಿಸಿದ್ದಾರೆ. ವೈಷ್ಣವಿ ಯಾವುದೇ ಸಂದರ್ಭದಲ್ಲೂ ನೀರು ಕುಡಿಯಬೇಕೆನಿಸಿದ್ರೆ ಅದಕ್ಕೂ ಮೊದಲು ಮನೆಯ ಯಾವುದಾದರೂ ಒಬ್ಬ ಸದಸ್ಯರಿಗೆ ಡ್ಯಾನ್ಸ್ ಸ್ಟೆಪ್ ಹೇಳಿಕೊಡಬೇಕು. ಆ ಸ್ಪರ್ಧಿ ಡ್ಯಾನ್ಸ್ ಸ್ಟೆಪ್ ಸರಿಯಾಗಿ ಮಾಡಿದರೆ ನೀರು ಕುಡಿಯಬಹುದು.
ಆದ್ರೂ ಬಿಗ್ ಬಾಸ್ ಇಲ್ಲೂ ಕೂಡ ಒಂದು ಟ್ವಿಸ್ಟ್ ಇಟ್ಟಿದ್ದಾರೆ. ವೈಷ್ಣವಿ ನೀರು ಕುಡಿಯಲು ತಮ್ಮ ಕೈಗಳನ್ನ ಬಳಸುವಂತಿಲ್ಲ. ಬದಲಾಗಿ ಆಕೆ ಯಾರಿಗೆ ಡ್ಯಾನ್ಸ್ ಸ್ಟೆಪ್ ಹೇಳಿಕೊಡ್ತಾರೋ ಅವರೇ ಆಕೆಗೆ ನೀರು ಕುಡಿಸಬೇಕು. ಸದ್ಯ ಈ ಶಿಕ್ಷೆ ಕೇಳಿ ವೈಷ್ಣವಿ ಪೇಚಿಗೆ ಸಿಲುಕಿದ್ರು ಸ್ವೀಕಾರ ಮಾಡಿದ್ಧಾರೆ.
ಕೊರೊನಾ ಪರಿಸ್ಥಿತಿಯನ್ನ ದಯವಿಟ್ಟು ಲಘುವಾಗಿ ಪರಿಗಣಿಸಬೇಡಿ -ಅನಿರುದ್ಧ
ಬದಲಾದ ಸಮಯದಲ್ಲಿ ಬರಲಿದೆ ಕಿರುತೆರೆಯ ‘ಮಹಾನಾಯಕ’..!
ಇವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು : ಜಗ್ಗೇಶ್ ಆಕ್ರೋಶ
ಸಮಯ ನಿಜವಾಗಿಯೂ ಕಳೆದು ಹೋಗುತ್ತದೆ – ಹಳೆಯ ಚಿತ್ರದ ಜೊತೆಗೆ ಸಚಿನ್ ಗೆ ಹುಟ್ಟುಹಬ್ಬದ ಶುಭಾಶಯ ಹಾರೈಸಿದ ಕರಿಷ್ಮಾ ಕಪೂರ್