BIGGBOSS 8 : 3ನೇ ವಾರ ಮನೆಯಿಂದ ಆಚೆ ಬಂದ ‘ಗುಂಡಮ್ಮ’..!
ಬೆಂಗಳೂರು: ಬಿಗ್ ಬಾಸ್ 8ನೇ ಆವೃತ್ತಿಯಲ್ಲಿ 3 ವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮೂರನೇ ವಾರ ಬ್ರಹ್ಮಗಂಟು ಗೀತಾ ಮನೆಯಿಂದ ಹೊರಬಂದಿದ್ದಾರೆ. ಮೊದಲ ವಾರ ಟಿಕ್ಟಾಕ್ ಸ್ಟಾರ್ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಎಲಿಮಿನೇಟ್ ಆಗಿದ್ದರು. ಇದೀಗ 3ನೇ ವಾರ ಗೀತಾ ಮನೆಯಿಂದ ಆಚೆ ಬಂದಿದ್ದಾರೆ.
ಮನೆಯಿಂದ ಹೊರ ಬಂದ ಗೀತಾ ಸುದೀಪ್ ಜೊತೆ ವೇದಿಕೆ ಹಂಚಿಕೊಂಡು ಭಾವುಕರಾಗಿ ಮಾತನಾಡಿದರು. ಮನೆಯಲ್ಲಿರೋ ಎಲ್ಲರನ್ನ ತುಂಬಾನೇ ಪ್ರೀತಿಸುತ್ತೇನೆ. ಅವರೆಲ್ಲರನ್ನೂ ಮಿಸ್ ಮಾಡಿಕೊಳ್ತೇನೆ ಎಂದಿದ್ದಾರೆ. ಅಲ್ಲದೇ ಮುಂದಿನದಿನಗಳಲ್ಲಿ ಸಣ್ಣ ಆಗುವುದಕ್ಕೆ ಟ್ರೈ ಮಾಡ್ತೇನೆ ಎಂದಿದ್ದಾರೆ. ಅಲ್ಲದೇ ಮುಂದಿನ ವಾರ ಯಾರು ಮನೆಯಿಂದ ಹೊರ ಬರಬಹುದು ಎಂಬ ಪ್ರಶ್ನೆಗೆ ಉತ್ತರಿಸಿ ಮುಂದಿನ ವಾರ ಶಮಂತ್ ಆಚೆ ಬರಬಹುದು ಎಂಬ ಅಭಿಪ್ರಾಯವನ್ನ ಹೊರಹಾಕಿದ್ದಾರೆ.
ಸ್ಪೈ ಜೆಟ್ ಮೇಲೆ ಸೋನು ಸೂದ್ ಭಾವಚಿತ್ರ..! ರಿಯಲ್ ಹೀರೋಗೆ ವಿಷೇಶ ಗೌರವ..!
‘ಸಿಡಿ ಲೇಡಿ’ ಹೊಸ ಟೈಟಲ್ ರಿಜಿಸ್ಟರ್..! ಸಂದೇಶ್ ನಾಗರಾಜ್ ಹೇಳಿದ್ದೇನು..?