Biggboss Kannada: ಮೊದಲ ವಾರ ದೊಡ್ಮನೆಯಿಂದ ಹೊರ ನಡೆದ ಸ್ಪರ್ಧಿ ಇವರೇ..!!
OTT ನಂತರ ಕಿರುತೆರೆಯಲ್ಲಿ ಶುರುವಾಗಿರುವಾ ಬಿಗ್ ಬಾಸ್ ಸೀಜನ್ 9 ರ ಮೊದಲ ಎಲಿಮಿನೇಷನ್ ಇಂದು ನಡೆದಿದೆ. ಮೊದಲ ವಾರದಲ್ಲಿ ಯಾರು ಹೊರಹೋಗ್ತಾರೆ ಎನ್ನುವ ಕುತೂಹಲ ಬಿಗ್ ಬಾಸ್ ಅಭಿಮಾನಿಗಳಲ್ಲಿದೆ.
ಶನಿವಾರದ ವೀಕೆಂಡ್ ಸಂಚಿಕೆ ಮುಕ್ತಾಯವಾಗಿದ್ದು ಎಲಿಮಿನೇಷನ್ ಸುತ್ತಿನಲ್ಲಿದ್ದ 12 ಮಂದಿ ಪೈಕಿ ಮೂವರು ಸೇಫ್ ಆಗಿದ್ದಾರೆ.. ಇನ್ನುಳಿದವರಲ್ಲಿ ಯಾರು ಮನೆಯಿಂದ ಹೊರನಡೆಯಲಿದ್ದಾರೆ ಎಂಬುದು ಭಾನುವಾರದ ಸಂಚಿಕೆಯಲ್ಲಿ ಗೊತ್ತಾಗಲಿದೆ..
ಆದ್ರೆ ಮೂಲಗಳ ಪ್ರಕಾರ ದೊಡ್ಮನೆಯಿಂದ ಈ ವಾರ ಬೈಕ್ ರೇಸೆರ್ ಐಶ್ವರ್ಯ ಪಿಸ್ಸೆ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗ್ತಿದೆ. ವೋಟ್ ಕಡಿಮೆ ಬಂದ ಹಿನ್ನೆಲೆ ಐಶ್ವರ್ಯ ಮನೆಯಿಂದ ಹೊರ ಹೋಗಿದ್ದಾರೆ.
ಟಾಸ್ಕ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದರಾದರೂ ಅದರ ಹೊರಗಡೆಯ ಅಷ್ಟಾಗಿ ಗುರುತಿಸಿಕೊಳ್ಳದ ಕಾರಣ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ. ಅಧಿಕೃತವಾಗಿ ಇಂದು ರಾತ್ರಿಯ ಎಪಿಸೋಡ್ ನಲ್ಲಿ ಮನೆಯಿಂದ ಹೊರನಡೆದ ಸ್ಪರ್ಧಿಯ ಬಗ್ಗೆ ಗೊತ್ತಾಗಲಿದೆ..
ಬೆಂಗಳೂರು ಮೂಲದ ಐಶ್ವರ್ಯಾ ಅವರು ಮೋಟಾರ್ ಸ್ಪೋರ್ಟ್ಸ್ ಮಹಿಳಾ ಕ್ಯಾಟಗರಿಯಲ್ಲಿ ವಿಶ್ವಮಟ್ಟದಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿ ಕೂಡ ಪಡೆದಿದ್ದಾರೆ.
Biggboss Kannada: Aishwarya pise out of the Bigg Boss house