ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಅಪರಹರಣ ಹಾಗೂ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದ ಅಮ್ಮನನ್ನು ಕಂಡು ಪವಿತ್ರಾ ಗೌಡ ಮಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.
ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್, ದರ್ಶನ್ ಸಹಿತ 4 ಜನರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿದರೆ, ಪವಿತ್ರಾ ಗೌಡ ಸೇರಿದಂತೆ 9 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಕೋರ್ಟ್ ಗೆ ಆಗಮಿಸಿದ್ದ ಪವಿತ್ರಾ ಗೌಡ ತಾಯಿ ಹಾಗೂ ಮಗಳು ಪವಿತ್ರಾ ಗೌಡ (Pavithra Gowda) ಕೋರ್ಟ್ನಿಂದ ಹೊರ ಬಂದು ಪೊಲೀಸ್ ವ್ಯಾನ್ ಹತ್ತುತ್ತಿದ್ದಂತೆಯೇ ಕಣ್ಣೀರು ಸುರಿಸಿದ್ದಾರೆ. ಪವಿತ್ರಾ ಗೌಡ ಕೂಡ ಇಬ್ಬರನ್ನು ನೋಡಿ ಗದ್ಗದಿತರಾದರು. ಆನಂತರ ಅಮ್ಮ ಹಾಗೂ ಮಗಳನ್ನು ಸಮಾಧಾನ ಪಡಿಸಿದ್ದಾರೆ.
ಕಣ್ಣೀರು ಹಾಕುತ್ತಾ ಇದ್ದ ಮಗಳಿಗೆ, ಏನೂ ಆಗಲ್ಲ. ಸುಮ್ಮನಿರು ಎಂದು ಪವಿತ್ರಾ ಗೌಡ ಹೇಳಿ ಸಮಾಧಾನ ಪಡಿಸಿದ್ದಾರೆ. ಆದರೆ, ಹೆಚ್ಚಿನ ಮಾತುಕತೆಗೆ ಪೊಲೀಸರು ಅವಕಾಶ ಮಾಡಿ ಕೊಟ್ಟಿಲ್ಲ. ಆನಂತರ ಅಳುತ್ತಲೇ ಪವಿತ್ರಾ ಅಳುತ್ತಲೇ ತಲೆ ತಗ್ಗಿಸಿಕೊಂಡು ಪವಿತ್ರಾ ಪರಪ್ಪನ ಅಗ್ರಹಾರ ಜೈಲಿನತ್ತ ತೆರಳಿದರು.