ಬಾಲಿವುಡ್ ನ ಖ್ಯಾತ ನಟ ಬಿಕ್ರಮ್ ಜೀತ್ ಕನ್ವರ್ ಪಾಲ್ ಕೊರೊನಾಗೆ ಬಲಿ

1 min read

ಬಾಲಿವುಡ್ ನ ಖ್ಯಾತ ನಟ ಬಿಕ್ರಮ್ ಜೀತ್ ಕನ್ವರ್ ಪಾಲ್ ಕೊರೊನಾಗೆ ಬಲಿ

ಕೊರೊನಾ ಮಾಹಾಮಾರಿಗೆ ಮತ್ತೊಬ್ಬ ಬಾಲಿವುಡ್ ನಟ ಬಲಿಯಾಗಿದ್ದಾರೆ. ಬಾಲಿವುಡ್ ನ ಖ್ಯಾತ ನಟ ಬಿಕ್ರಮ್ ಜೀತ್ ಕನ್ವರ್ ಪಾಲ್ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಅನೇಕ ಸಿನಿಮಾ ಮತ್ತು ಟಿವಿ ಮತ್ತು ವೆಬ್ ಸೀರಿಸ್ ನಲ್ಲಿ ಮಿಂಚಿದ್ದ 52 ವರ್ಷದ ಕನ್ವರ್  ವಿಧಿವಶರಾಗಿದ್ದು, ಅವರಿಗೆ ಸಿನಿಮಾರಂಗದವರು ಸಂತಾಪ ಸೂಚಿಸುತ್ತಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಬಿಕ್ರಮ್ ಜೀತ್ ಅವರನ್ನು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಬಿಕ್ರಮ್ ಜೀತ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಕ್ರಮ್ ಜೀತ್ ಸೇನೆಯಿಂದ ನಿವೃತ್ತಿಯಾದ ಬಳಿಕ 2003ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದರು. 2 ಸ್ಟೇಟ್ಸ್, ಘಾಜಿ ಆಟ್ಯಾಕ್, ಪೇಜ್-3, ಅರಕ್ಷನ್, ಮರ್ಡರ್-2,  ಜಬ್ ತಕ್ ಹೈ ಜಾನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd