ಬಿಜೆಪಿಯವರು ಮೋಸ್ಟ್ ಕರಪ್ಟ್ ಪೀಪಲ್ ಆನ್ ಆರ್ಥ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದು, ಮತ್ತೆ ಬಿಜೆಪಿ ವಿರುದ್ಧ ಭಾರೀ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ KPCC ಕಚೇರಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚುತ್ತಿರುವುದಕ್ಕೆ ಪ್ರಮುಖ ಕಾರಣ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಎಂದು ಅವರನ್ನು ನೇರವಾಗಿ ಹೊಣೆ ಮಾಡಿದರು.
ಭ್ರಷ್ಟಾಚಾರದ ಮೂಲವೇ BJP ಮತ್ತು RSS
ಯಾರಾದರೂ ಈ ಲೋಕದಲ್ಲಿ ಅತ್ಯಂತ ಭ್ರಷ್ಟರು ಇದ್ದಾರೆ ಎಂದಾದರೆ, ಅದು RSS ಮತ್ತು BJPಯಲ್ಲೇ ಇರುತ್ತಾರೆ. ಅವರು ಅಧಿಕಾರದಲ್ಲಿರುವಾಗ ಭ್ರಷ್ಟಾಚಾರಕ್ಕೆ ಹೊಸ ರೂಪ ನೀಡುತ್ತಾರೆ, ಎಂದು ಸಿದ್ದರಾಮಯ್ಯ ಆರೋಪಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಅಂತಹ ಭ್ರಷ್ಟ ಪದ್ಧತಿಗೆ ಅವಕಾಶವಿಲ್ಲ. ನಮ್ಮ ಆಡಳಿತದಲ್ಲಿ ವ್ಯವಸ್ಥಿತವಾದ ಜನಪರ ನೀತಿಗಳೇ ಮುಂದೆ ಇದೆ ಎಂದು ಅವರು ಹೇಳಿದರು.
ಬಂಡವಾಳ ಶಾಹಿಗಳ ಪಕ್ಷ BJP
ಭಾರತೀಯ ಜನತಾ ಪಕ್ಷ, ಬಂಡವಾಳ ಶಾಹಿಗಳ ಪಕ್ಷ. ಸಾರ್ವಜನಿಕ ಸಂಪತ್ತನ್ನು ಕೇವಲ ಕೆಲ ಹಿತಚಿಂತಕರಿಗೆ ಒಪ್ಪಿಸುವ ಕೆಲಸ ಮಾಡಿದವರು ಇವರೇ. ಅವರ ಆಡಳಿತದ ಅವಧಿಯಲ್ಲಿ ಹಗರಣಗಳು, ಭ್ರಷ್ಟ ಆಳ್ವಿಕೆ ಮತ್ತು ಶಿಸ್ತುಭಂಗ ಸಾಮಾನ್ಯವಾಗಿತ್ತು. ಈಗ ನಾವು ಅದನ್ನು ತಿದ್ದಲು ಪ್ರಯತ್ನಿಸುತ್ತಿದ್ದೇವೆ, ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರಕ್ಕಿಲ್ಲ ಅವಕಾಶ
ಸಿದ್ದರಾಮಯ್ಯ ಅವರು ತಮ್ಮ ಆಡಳಿತಕಾಲದ ಸಮಯವನ್ನು ನೆನೆಸಿಕೊಂಡು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈಗಾಗಲೇ ಹಲವು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ, ಕೆಲವು ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.