ADVERTISEMENT
Thursday, January 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

ಬಿಜೆಪಿ ಹಿಂದಿನಿಂದಲೂ ಮೀಸಲಾತಿ ವಿರೋಧಿ : ಸಿದ್ದರಾಮಯ್ಯ

Mahesh M Dhandu by Mahesh M Dhandu
September 17, 2021
in Uncategorized
Siddaramaiah We will win 150 seats in the next election

Siddaramaiah We will win 150 seats in the next election

Share on FacebookShare on TwitterShare on WhatsappShare on Telegram

ಬಿಜೆಪಿ ಹಿಂದಿನಿಂದಲೂ ಮೀಸಲಾತಿ ವಿರೋಧಿ : ಸಿದ್ದರಾಮಯ್ಯ

ಬೆಂಗಳೂರು : ಬಿಜೆಪಿ ಹಿಂದಿನಿಂದಲೂ ಮೀಸಲಾತಿ ವಿರೋಧಿಯಾಗಿದೆ. ಈಗ ಕ್ಷೇತ್ರಗಳ ಪುನರ್ ವಿಂಗಡನೆಗೆ ಆಯೋಗ ರಚನೆ ಮಾಡಿ, ಮೀಸಲಾತಿಯನ್ನು ನಾಶಮಾಡುವ ಹುನ್ನಾರ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Related posts

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

January 4, 2026
Know the Importance of Chanting Navagraha Mantra on This Auspicious Day

ನವಗ್ರಹ ಮಂತ್ರ ದಿನ ಪಠಿಸುವುದರ ಮಹತ್ವ ತಿಳಿಯಿರಿ

December 20, 2025

ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣಾ ಕ್ಷೇತ್ರಗಳ ಪುನರ್ ವಿಂಗಡನೆಗೆ ಪ್ರತ್ಯೇಕ ಆಯೋಗ ರಚನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಚುನಾವಣಾ ಆಯೋಗದ ಅಧಿಕಾರವನ್ನು ಕಿತ್ತುಕೊಂಡು ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣಾ ಕ್ಷೇತ್ರಗಳ ಪುನರ್ ವಿಂಗಡನೆಗೆ ಪ್ರತ್ಯೇಕ ಆಯೋಗ ರಚನೆ ಮಾಡಲು ಹೊರಟಿದೆ. ಈ ಕರಾಳ ಶಾಸನವನ್ನು ನಮ್ಮ ಪಕ್ಷ ಬಲವಾಗಿ ವಿರೋಧಿಸುತ್ತದೆ.

ಚುನಾವಣಾ ಆಯೋಗಕ್ಕೆ ನೀಡಿರುವ ಮಾರ್ಗದರ್ಶಿಸೂತ್ರಗಳನ್ನು ನ್ಯಾಯಾಲಯದಲ್ಲಿ ಹಲವರು ಪ್ರಶ್ನಿಸಿದ್ದಾರೆ. ನ್ಯಾಯಾಲಯದ ತೀರ್ಪಿಗಿಂತ ಮೊದಲೇ ಬಿಜೆಪಿ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ತರಾತುರಿಯಲ್ಲಿ ಅನುಮೋದನೆ ಪಡೆಯಲು ವಿರೋಧ ಪಕ್ಷಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ.

ಚುನಾವಣಾ ಆಯೋಗವು ಕ್ಷೇತ್ರಗಳ ಮೀಸಲಾತಿ ವಿಂಘಡನೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಅಭಿಪ್ರಾಯ ಬಿಜೆಪಿ ಸರ್ಕಾರಕ್ಕೆ ಇದ್ದಿದ್ದರೆ ಈ ಹಿಂದೆಯೇ ವಿಧೇಯಕಕ್ಕೆ ತಿದ್ದುಪಡಿ ಮಾಡಬೇಕಿತ್ತು, 2 ವರ್ಷದಿಂದ ಸುಮ್ಮನಿದ್ದು ಚುನಾವಣೆ ಸಮೀಪಿಸುವ ವೇಳೆ ತಿದ್ದುಪಡಿ ಮಾಡಲು ಹೊರಟಿರುವುದರ ಹಿಂದೆ ರಾಜಕೀಯ ಹುನ್ನಾರ ಇದೆ.

ಪಂಚಾಯತ್ ರಾಜ್ ಚುನಾವಣೆಯಲ್ಲಿ ಮೀಸಲಾತಿಗೆ 1994ರಲ್ಲಿ ಜನತಾ ದಳದ ಸರ್ಕಾರ ಎಂ.ಪಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿತ್ತು. ಭೈರೇಗೌಡ, ನಾಣಯ್ಯ ಮತ್ತು ಪಿ.ಜಿ.ಆರ್ ಸಿಂಧ್ಯಾ ಜೊತೆ ನಾನೂ ಸಮಿತಿ ಸದಸ್ಯನಾಗಿದ್ದೆ. ಆ ಸಮಿತಿ ವರದಿ ಆಧಾರದಲ್ಲಿಯೇ ಪಂಚಾಯತ್ ರಾಜ್ ಚುನಾವಣೆಯಲ್ಲಿ ಮೀಸಲಾತಿ ಜಾರಿಗೊಳಿಸಲಾಗಿತ್ತು.

Siddaramaiah saaksha tv

ಮಹಿಳೆಯರಿಗೆ 33% , ಹಿಂದುಳಿದ ಜಾತಿಗಳಿಗೆ 26.4% , ಹಿಂದುಳಿದ ಜಾತಿಗೆ ಸೇರದವರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ 6.6% ಮೀಸಲಾತಿ ನೀಡಬೇಕು ಎಂದು ನಮ್ಮ ಸಮಿತಿ ನೀಡಿದ್ದ ವರದಿಯನ್ನು ಆಧರಿಸಿ ಪಂಚಾಯತ್ ರಾಜ್ ಚುನಾವಣೆಯಲ್ಲಿ ಮೀಸಲಾತಿ ಜಾರಿಗೊಳಿಸಲಾಯಿತು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಯಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ನಮ್ಮ ಸಮಿತಿ ಮಾಡಿದ್ದ ಶಿಫಾರಸ್ಸನ್ನು ಪರಿಗಣಿಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೂ ಮೀಸಲಾತಿ ನೀಡಲಾಯಿತು

ಪ್ರಧಾನಿ ರಾಜೀವ್ ಗಾಂಧಿಯವರು ಸಂವಿಧಾನಕ್ಕೆ 73 ಹಾಗೂ 74 ನೇ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿ ನೀಡಿದ್ದರು. ಈ ಮೀಸಲಾತಿಯನ್ನು ಬಿಜೆಪಿಯ ರಾಜ್ಯಸಭಾ ಸದಸ್ಯ ದಿವಂಗತ ರಾಮಾ ಜೊಯಿಷ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು.

ಕಾಂಗ್ರೆಸ್ ಪಕ್ಷ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಬೇಕು ಎಂದು ಸಂವಿಧಾನ ತಿದ್ದುಪಡಿ ಮಾಡಿ, ಕಾನೂನು ಜಾರಿ ಮಾಡಿತು. ಇದರಿಂದ ಮಹಿಳೆಯರಿಗೆ ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 50% ಮೀಸಲಾತಿ ಸಿಕ್ಕಿದೆ.

ಬಿಜೆಪಿ ಹಿಂದಿನಿಂದಲೂ ಮೀಸಲಾತಿ ವಿರೋಧಿಯಾಗಿದೆ. ಈಗ ಕ್ಷೇತ್ರಗಳ ಪುನರ್ ವಿಂಗಡನೆಗೆ ಆಯೋಗ ರಚನೆ ಮಾಡಿ, ಮೀಸಲಾತಿಯನ್ನು ನಾಶಮಾಡುವ ಹುನ್ನಾರ ಮಾಡಿದೆ. ಇದು ಸಂವಿಧಾನದ ಮೇಲಿನ ದಾಳಿಯಾಗಿದೆ. ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಈ ವಿಧೇಯಕವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

Tags: #Saaksha TVBJPCongressSiddaramaiah
ShareTweetSendShare
Join us on:

Related Posts

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

by Author2
January 4, 2026
0

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ ಪ್ರತಿನಿತ್ಯ ಮುಂಜಾನೆ ಈ ಒಂದು ಶಕ್ತಿಶಾಲಿಯಾದ ಅಂತಹ ನರಸಿಂಹ...

Know the Importance of Chanting Navagraha Mantra on This Auspicious Day

ನವಗ್ರಹ ಮಂತ್ರ ದಿನ ಪಠಿಸುವುದರ ಮಹತ್ವ ತಿಳಿಯಿರಿ

by Saaksha Editor
December 20, 2025
0

ನಮ್ಮ ಜಾತಕದಲ್ಲಿರುವ ನವಗ್ರಹಗಳು ನಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ನಿರ್ಧರಿಸುತ್ತವೆ. ನಾವು ಯಾವುದೇ ದೇವಸ್ಥಾನಕ್ಕೆ (Temple) ಭೇಟಿ ನೀಡಿದರೂ ನವಕೃಷ್ಣರನ್ನು ಪೂಜಿಸುವುದಿಲ್ಲ. ...

Even dull kids can become intelligent chant Saraswati mantra

ಮೂರ್ಖ ಮಕ್ಕಳು ಕೂಡ ವಿದ್ಯಾವಂತರಾಗಲು ಈ ಉಪಾಯ ಮಾಡಿ

by Saaksha Editor
November 10, 2025
0

ಕೆಲವೊಂದು ಬಾರಿ ತರಗತಿಯಲ್ಲಿ ಚೆನ್ನಾಗಿ ಓದುತ್ತಿದ್ದ ಮಕ್ಕಳು ಮಂಕಾಗುತ್ತಾರೆ, ಇನ್ನು ಕೆಲವೊಂದು ಬಾರಿ ತರಗತಿಯಲ್ಲಿ ಕೂತಿದ್ದರು ಸಹ ಮನಸ್ಸು ಮಾತ್ರ ಬೇರೆ ಕಡೆ ಇರುತ್ತದೆ ಮತ್ತು ವಿದ್ಯಾಭ್ಯಾಸದ...

India vs West Indies 2nd Test: Blue Boys Close to Victory Match Highlights

ಭಾರತ-ವಿಂಡೀಸ್‌ 2ನೇ ಟೆಸ್ಟ್‌- ಗೆಲುವಿನ ಸನೀಹದಲ್ಲಿ ಬ್ಲೂ ಬಾಯ್ಸ್‌

by Saaksha Editor
October 13, 2025
0

ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ (Team India) ಗೆಲುವಿನ ಸನೀಹದಲ್ಲಿದೆ. ಪಂದ್ಯ ಐದನೇ ದಿನ  ಟೀಮ್‌ ಇಂಡಿಯಾಗೆ ಬೇಕಾಗಿರೋದು ಕೇವಲ 58 ರನ್‌...

ನವರಾತ್ರಿಯ ನವದಿನಗಳ ಅರ್ಥ ಹಾಗೂ ಮಹತ್ವ ತಿಳಿಯಿರಿ

ನವರಾತ್ರಿಯ ನವದಿನಗಳ ಅರ್ಥ ಹಾಗೂ ಮಹತ್ವ ತಿಳಿಯಿರಿ

by Saaksha Editor
September 26, 2025
0

'ರಾತ್ರಿ' ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ. ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು. ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ. ಬದಲಾವಣೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram