BJP | ಭಾರತ್ ಜೋಡೋ ಯಾತ್ರೆ ನಾಟಕ ಶುರು ಮಾಡಿರುವುದು ಹಾಸ್ಯಾಸ್ಪದ
ಬೆಂಗಳೂರು : ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬಗ್ಗೆ ರಾಜ್ಯ ಬಿಜೆಪಿ ಕಿಡಿಕಾರಿದೆ. ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಂದ 2000 ಕೋಟಿ ರೂಪಾಯಿ ಲೂಟಿ ಮಾಡಿ ನಕಲಿ ಗಾಂಧಿಗಳು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣವು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ದೇಶಕ್ಕೇ ತೋರಿಸಿಕೊಟ್ಟಿದೆ ಎಂದು ಕಿಡಿಕಾರಿದೆ.
ಇನ್ನು 2008 ರಲ್ಲಿ, ಮುಂಬೈ ಮೇಲೆ ಭಯೋತ್ಪಾದಕ ದಾಳಿಯಲ್ಲಿ 170 ಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದರು. ಆಗ ರಾಹುಲ್ ಗಾಂಧಿ ಏನು ಮಾಡುತ್ತಿದ್ದರೆಂದು ಊಹಿಸಿ?

ದೆಹಲಿಯ ಫಾರ್ಮ್ಹೌಸ್ನಲ್ಲಿ ಪಾರ್ಟಿ ಮಾಡುತ್ತಿದ್ದರು. ಇದು ನೋಡಿ ಕಾಂಗ್ರೆಸ್ ನ ರಾಷ್ಟ್ರೀಯತೆ ಎಂದರೆ. ಆದರೆ ಈಗ ಇವರೇ ಭಾರತ್ ಜೋಡೋ ಯಾತ್ರೆ ನಾಟಕ ಶುರು ಮಾಡಿರುವುದು ಹಾಸ್ಯಾಸ್ಪದ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರು, ಗಾಂಧಿ ಕುಟುಂಬದ ಬೆಂಬಲ ಮತ್ತು ಆಶೀರ್ವಾದದಿಂದ ಮೂರ್ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಇದು ಕಾಂಗ್ರೆಸ್ ನ ಗುಲಾಮ ಮತ್ತು ಭ್ರಷ್ಟ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಬರೆದುಕೊಂಡಿದ್ದಾರೆ.