BJP | ಗೂಂಡಾಗಿರಿಗೆ ಮತ್ತೊಂದು ಹೆಸರೇ ಕಾಂಗ್ರೆಸ್
ಬೆಂಗಳೂರು : ಗೂಂಡಾಗಿರಿಗೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ರಾಜ್ಯ ಬಿಜೆಪಿ ಟೀಕೆ ಮಾಡಿದೆ.
ರಸ್ತೆ ಸಮಸ್ಯೆ ಕೇಳಿದ್ದಕ್ಕೆ ಕಾಂಗ್ರೆಸ್ ಶಾಸಕ ಯುವಕನಿಗೆ ಕಪಾಳಮೋಕ್ಷ ಮಾಡಿದ್ದು, ಈ ಸಂಬಂಧ ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಗೂಂಡಾಗಿರಿಗೆ ಮತ್ತೊಂದು ಹೆಸರೇ ಕಾಂಗ್ರೆಸ್. ಅಂದು ಕರೆಂಟ್ ಕೇಳಿದ ನಾಗರಿಕನಿಗೆ ಜೈಲು ಭಾಗ್ಯ, ಇಂದು ನೀರು ಕೇಳಿದವನಿಗೆ ಕಪಾಳ ಮೋಕ್ಷದ ಭಾಗ್ಯ. ಕೊತ್ವಾಲನ ಶಿಷ್ಯನೇ ಕೆಪಿಸಿಸಿಯ ಅಧ್ಯಕ್ಷನಾಗಿರುವಾಗ ಸೌಜನ್ಯತೆ ಎಂಬ ಪದಕ್ಕೆ ಅರ್ಥ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ.
ಹಿಂದು ವಿರೋಧಿ #ಮೀರ್‌ಸಾದಿಕ್ ಗೆ ವಿಪಕ್ಷ ನಾಯಕನ ಪಟ್ಟ. ಕೆಪಿಸಿಸಿ ಭ್ರಷ್ಟಾಧ್ಯಕ್ಷರಿಂದ ಅಲ್ಪಮತೀಯ ಕೋಮು ಕ್ರಿಮಿಗಳಿಗೆ ಅಮಾಯಕರ ಪಟ್ಟ. ಧರ್ಮ ವಿಭಜಕನಿಗೆ ಪ್ರಚಾರ ಸಮಿತಿ ಅಧ್ಯಕ್ಷ ಪಟ್ಟ. ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ಹುಬ್ಬಳ್ಳಿಯಂಥ ಹತ್ತಾರು ಘಟನೆಗೆ ಸಂಚು ರೂಪಿಸುತ್ತಿದ್ದಾರೆಯೇ ಎಂದು ಕಿಡಿಕಾರಿದೆ.
ಕೈ ನಾಯಕರು ಕೈ ಎತ್ತುವಲ್ಲಿ ಪ್ರವೀಣರು. ಚುನಾವಣೆ ಸಮಯದಲ್ಲಿ ಮತದಾರರು ಬೇಕು, ಪಕ್ಷದ ಕಾರ್ಯಕರ್ತರು ಬೇಕು, ಆಮೇಲೆ ಇಬ್ಬರಿಗೂ ಸಿಗೋದು ಬರಿ ಕಪಾಳ ಮೋಕ್ಷ. ಕೈ ಹಿಡಿದು ನಡೆಸುವುದು ನಾಯಕರ ಲಕ್ಷಣ, ಕೈ ಎತ್ತುವುದು ಖಳನಾಯಕರ ಲಕ್ಷಣವೇ ಸರಿ ಎಂದು ಬಿಜೆಪಿ ಪ್ರಶ್ನಿಸಿದೆ.