ನಟಿ ಶ್ರುತಿ ಹಾಸನ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಆಗ್ರಹ

1 min read
criminal action Shruti Haasan

ನಟಿ ಶ್ರುತಿ ಹಾಸನ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಆಗ್ರಹ

ನಟಿ ಶ್ರುತಿ ಹಾಸನ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ಜನತಾ ಪಕ್ಷ ಒತ್ತಾಯಿಸಿದೆ. ಮಕ್ಕಲ್ ನೀಧಿ ಮಾಯಂ (ಎಂಎನ್‌ಎಂ) ಸಂಸ್ಥಾಪಕ ಮತ್ತು ಹಿರಿಯ ನಟ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ. ಎಂಎನ್‌ಎಂ ಮುಖ್ಯಸ್ಥ ಮತ್ತು ಆಕೆಯ ತಂದೆ ಕಮಲ್ ಹಾಸನ್ ಅವರೊಂದಿಗೆ ಮತದಾನ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಶ್ರುತಿ ಹಾಸನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ತಿಳಿಸಿದೆ.
criminal action Shruti Haasan

ಮಂಗಳವಾರ ಮತ ಚಲಾಯಿಸಿದ ನಂತರ ಕಮಲ್ ಹಾಸನ್ ತಮ್ಮ ಪುತ್ರಿಯರಾದ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಅವರೊಂದಿಗೆ ಕೊಯಮತ್ತೂರು ದಕ್ಷಿಣಕ್ಕೆ ಭೇಟಿ ನೀಡಿದರು. ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣದಿಂದಲೇ ಸ್ಪರ್ಧಿಸುತ್ತಿದ್ದಾರೆ.
ಕಮಲ್ ಹಾಸನ್ ಮತದಾನದ ಮಾಹಿತಿಗಾಗಿ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಶ್ರುತಿ ಕೂಡ ಅವರೊಂದಿಗೆ ಹಾಜರಿದ್ದರು. ನಂತರ ಅವರು ಬಿಜೆಪಿಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದರು. ತಮಿಳುನಾಡು ಚುನಾವಣೆಯಲ್ಲಿ ಗೆದ್ದರೆ ಮತದಾರರಿಗೆ ಹಣವನ್ನು ವಿತರಿಸುವುದಾಗಿ ಬಿಜೆಪಿ ಭರವಸೆ ನೀಡಿದೆ ಎಂದು ಆರೋಪಿಸಿದರು.
criminal action Shruti Haasan

ಬಿಜೆಪಿ ರಾಷ್ಟ್ರೀಯ ಮಹಿಳಾ ವಿಂಗ್ ನಾಯಕಿ ವನತಿ ಶ್ರೀನಿವಾಸನ್ ಪರವಾಗಿ, ಬಿಜೆಪಿ ಜಿಲ್ಲಾಧ್ಯಕ್ಷ ನಂದಕುಮಾರ್ ಅವರು ಜಿಲ್ಲಾ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದು, ಮತದಾನ ಕೇಂದ್ರಗಳಿಗೆ ಭೇಟಿ ನೀಡಿದ್ದಕ್ಕಾಗಿ ನಟಿ ಶ್ರುತಿ ಹಾಸನ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬೂತ್ ಏಜೆಂಟರನ್ನು ಹೊರತುಪಡಿಸಿ ಯಾರಿಗೂ ಮತದಾನ ಕೇಂದ್ರಗಳಿಗೆ ಹೋಗಲು ಅವಕಾಶವಿಲ್ಲ ಎಂಬ ನಿಯಮವಿದೆ ಎಂದು ಬಿಜೆಪಿ ತನ್ನ ದೂರಿನಲ್ಲಿ ತಿಳಿಸಿದೆ.

#criminalaction #ShrutiHaasan #Bjpdemand

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd