ಕಾಂಗ್ರೆಸ್ ವಿರುದ್ಧ `ಡೈರಿ ಪ್ರಕರಣ’ ಬಾಣ ಬಿಟ್ಟ ಬಿಜೆಪಿ

1 min read
belagavi by election

ಕಾಂಗ್ರೆಸ್ ವಿರುದ್ಧ `ಡೈರಿ ಪ್ರಕರಣ’ ಬಾಣ ಬಿಟ್ಟ ಬಿಜೆಪಿ

ಬೆಂಗಳೂರು : ಬಿಟ್ ಕಾಯಿನ್ ಪ್ರಕರಣವನ್ನು ಇಟ್ಟುಕೊಂಡು ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಬಾಣಗಳನ್ನು ಬಿಡುತ್ತಿತ್ತು. ಇದೀಗ ಕಾಂಗ್ರೆಸ್ ಗೆ ಟಕ್ಕರ್ ನೀಡುವ ನಿಟ್ಟಿನಲ್ಲಿ ಡೈರಿ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿ ಕಾಂಗ್ರೆಸ್ ಗೆ ಟಾಂಗ್ ನೀಡಿದೆ.

ಈ ಕುರಿತು ಸರಣಿ ಟ್ವೀಟ್ ಗಳನ್ನು ಬಿಟ್ಟಿರುವ ಬಿಜೆಪಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯವದು. ಸಿದ್ದರಾಮಯ್ಯ ಬೆಂಬಲಿಗರು ನೈತಿಕತೆಯ ಹುಸಿ ಪಾಠ ಮಾಡುತ್ತ ಖಜಾನೆಯನ್ನು ಖಾಲಿ ಮಾಡುತ್ತಿದ್ದ ಭ್ರಷ್ಟಾಚಾರದ ಉಚ್ಛ್ರಾಯ ಕಾಲ. ಆಗ ಬಹಿರಂಗಗೊಂಡಿದ್ದೇ ಕಾಂಗ್ರೆಸ್ ಎಂಎಲ್‍ಸಿ ಗೋವಿಂದರಾಜು ಅವರ ಡೈರಿ. ಕಾಂಗ್ರೆಸಿಗರೇ, ಈ ಪ್ರಕರಣವನ್ನು ಒಮ್ಮೆ ನೆನಪಿಸಿಕೊಳ್ಳಿ.

ಗೋವಿಂದರಾಜು ಅವರ ಐಟಿ ದಾಳಿಯಲ್ಲಿ ಸಿದ್ದರಾಮಯ್ಯನವರ ಪರವಾಗಿ ಗೋವಿಂದರಾಜು ಕಾಂಗ್ರೆಸ್ ಹೈಕಮಾಂಡ್‍ಗೆ ಸಲ್ಲಿಸಿದ ಕಪ್ಪ ಕಾಣಿಕೆಯ ವಿವರವಿತ್ತು. ಕಾಂಗ್ರೆಸ್ ಹೈಕಮಾಂಡ್, ಎಪಿ, ಆರ್.ಜಿ, ಎಸ್.ಜಿ ಮೊದಲಾದ ಸಂಕೇತಾಕ್ಷರಗಳಿದ್ದವು. ಸಿದ್ದರಾಮಯ್ಯನವರೇ, ಇವು ಯಾರ ಹೆಸರನ್ನು ಸೂಚಿಸುತ್ತಿದ್ದವು ಎಂಬುದು ಸ್ವಲ್ಪ ವಿವರಿಸಿ.

BJP saaksha tv

ಡಿಕೆಶಿ ಅವರ ಮನೆ ಮೇಲೆ ಐಟಿ ದಾಳಿ ನಡೆದಾಗ ಅವರೊಂದಷ್ಟು ಕಾಗದಗಳನ್ನು ಹರಿದು ಹಾಕಿದ್ದರು. ಹಠ ಬಿಡದ ಐಟಿ ಅಧಿಕಾರಿಗಳು ಆ ಚೀಟಿಗಳನ್ನು ಜೋಡಿಸಿದಾಗಲೂ ಎಐಸಿಸಿ, ಎಪಿ, ಆರ್‍ಜಿ, ಎಸ್‍ಜಿ ಎಂಬ ಉಲ್ಲೇಖಗಳಿತ್ತು. ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ನಡೆದಾಗಲೆಲ್ಲ ಇದೇ ಕೆಲವು ರಹಸ್ಯಾಕ್ಷರಗಳು ಹೊರಬರುತ್ತವೆ. ಯಾರಿವರು?

ಪುರಾವೆಗಳೇ ಇಲ್ಲದ ಪತ್ರವನ್ನಿಟ್ಟುಕೊಂಡು ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಕಾಂಗ್ರೆಸ್ ರಾಜ್ಯಪಾಲರನ್ನು ಆಗ್ರಹಿಸಿದೆ. ಆಧಾರ ರಹಿತ ಪತ್ರದ ಆಧಾರದಲ್ಲಿ ಸರ್ಕಾರ ವಜಾಗೊಳಿಸಲು ಒತ್ತಾಯಿಸುವುದಾದರೆ, ಐಟಿ ದಾಳಿಯಲ್ಲಿ ಲಭಿಸಿದ ಅಧಿಕೃತ ದಾಖಲೆಗಳ ಪ್ರಕಾರ ಕಾಂಗ್ರೆಸ್ ಸರ್ಕಾರವನ್ನೂ ಅಂದು ವಜಾಗೊಳಿಸಬೇಕಿತ್ತಲ್ಲವೇ?

ನನ್ನ ಆತ್ಮಹತ್ಯೆಗೆ ಕೆ.ಜೆ. ಜಾರ್ಜ್ ಕಾರಣ ಎಂದು ಡಿವೈಎಸ್ಪಿ ಗಣಪತಿ ನೇರ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡರು. ಆದರೆ ಕಾಂಗ್ರೆಸ್ ಅವರಿಗೆ ಮಾನಸಿಕ ರೋಗಿ ಎಂಬ ಪಟ್ಟಕಟ್ಟಿತು. ಕಾಂಗ್ರೆಸ್ಸಿಗರೇ, ನಿಮ್ಮ ಅಧಿಕಾರಾವಧಿಯಲ್ಲಿ ಸರ್ಕಾರವನ್ನು ವಜಾಮಾಡಲು ಸಾಕಷ್ಟು ಕಾರಣಗಳಿದ್ದವು, ನೆನಪಿಸಿಕೊಳ್ಳುವಿರಾ ಎಂದು ಬಿಜೆಪಿ ಕುಟುಕಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd