BJP ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯೂ ತಿಳಿದಿಲ್ಲ
ಬೆಂಗಳೂರು : ಬಿಜೆಪಿ ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯೂ ತಿಳಿದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಘಟಕ ಕುಟುಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಬಿಜೆಪಿ ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯೂ ತಿಳಿದಿಲ್ಲ, ದೇಶದ ಗೌರವವೂ ತಿಳಿದಿಲ್ಲ. ಎಷ್ಟಾದರೂ ಗೋಡ್ಸೆ ಭಕ್ತರಲ್ಲವೇ, ಭಗವಾಧ್ವಜದ ಆರಾಧಕರಲ್ಲವೇ,ಸಂವಿಧಾನ ವಿರೋಧಿಗಳಲ್ಲವೇ, ಮನದೊಳಗೆ ಸಂಘದ ಪಾಠವಾದ ತಿರಂಗಾ ದ್ವೇಷ ಇಟ್ಟುಕೊಂಡಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಧ್ವಜ ತಲೆಕೆಳಗಾಗಿಸುವುದೇ ಮೂಲ ಅಜೆಂಡಾ ಇರುವಂತಿದೆ ಎಂದು ಕಿಡಿಕಾರಿದೆ.
ಮುಂದುವರೆದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ರಾಜ್ಯದ ರೈತರನ್ನು ಮಳೆ ಮುಳುಗಿಸಿಲ್ಲ, ಬಿಜೆಪಿ ಸರ್ಕಾರವೇ ಅನ್ಯಾಯವೆಸಗಿ ಮುಳುಗಿಸುತ್ತಿದೆ. ನೆರೆಯಿಂದ ಆದ ಬೆಳೆ ನಷ್ಟವನ್ನು ಇದುವರೆಗೂ ಸರ್ಕಾರ ಸರ್ವೆ ನಡೆಸಿಲ್ಲ, ಪರಿಹಾರವೂ ಘೋಷಿಸಿಲ್ಲ. ನೆರೆಯಿಂದ ಸಂತ್ರಸ್ತರಾದವರಿಗೆ ಕೈಗೊಂಡ ತುರ್ತು ಪರಿಹಾರ ಕ್ರಮಗಳೇನು ಎಂದು ಸರ್ಕಾರ ಹೇಳಲಿ.
ಬಿಜೆಪಿ ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯೂ ತಿಳಿದಿಲ್ಲ, ದೇಶದ ಗೌರವವೂ ತಿಳಿದಿಲ್ಲ.
ಎಷ್ಟಾದರೂ ಗೋಡ್ಸೆ ಭಕ್ತರಲ್ಲವೇ, ಭಗವಾಧ್ವಜದ ಆರಾಧಕರಲ್ಲವೇ,
ಸಂವಿಧಾನ ವಿರೋಧಿಗಳಲ್ಲವೇ,ಮನದೊಳಗೆ ಸಂಘದ ಪಾಠವಾದ ತಿರಂಗಾ ದ್ವೇಷ ಇಟ್ಟುಕೊಂಡಿರುವ @nalinkateel ಅವರಿಗೆ ಧ್ವಜ ತಲೆಕೆಳಗಾಗಿಸುವುದೇ ಮೂಲ ಅಜೆಂಡಾ ಇರುವಂತಿದೆ#NakliDeshBhakts pic.twitter.com/9OHByP18jH
— Karnataka Congress (@INCKarnataka) August 12, 2022
ರಾಜಕೀಯ ಹೇಳಿಕೆ ನೀಡಬೇಕೆಂದರೆ ಎಲ್ಲೆಲ್ಲೋ ಬಿಲದಲ್ಲಿ ಅಡಗಿದ ಸಚಿವರೆಲ್ಲರೂ ಎದ್ದು ಓಡೋಡಿ ಬರುತ್ತಾರೆ, ನೆರೆ ವಿಚಾರ ಬಂದರೆ ಬಿಲ ಸೇರುತ್ತಾರೆ! ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳ ನೆರೆ ಹಾನಿಯ ಬಗ್ಗೆ ಕೈಗೊಂಡ ಕ್ರಮಗಳೇನು ಎಂದು ಕೇಳಿದರೆ ಮೌನಕ್ಕೆ ಜಾರುತ್ತಾರೆ. ಇದು ಬಿಜೆಪಿ ಸರ್ಕಾರದ ಕಾರ್ಯವೈಖರಿ!
ರಾಷ್ಟ್ರಧ್ವಜ ಮಾರಾಟದ ಸರಕಾದಾಗ ಅದರ ಗುಣಮಟ್ಟ ಕಳೆದುಹೋಗುತ್ತವೆ, ವ್ಯಾಪಾರವೇ ಮುಖ್ಯವಾದಾಗ ಶ್ರದ್ಧೆ, ಭಕ್ತಿಗಳು ಕಳೆದುಹೋಗುತ್ತದೆ. ಮೊಟ್ಟೆಯಾಕಾರದ ಚಕ್ರ, ನಿಯಮವಿಲ್ಲದ ರಚನೆ, ಆಕಾರವಿಲ್ಲದ ಧ್ವಜ, ಹರಿದ, ಬಣ್ಣಗೆಟ್ಟ ರಾಷ್ಟ್ರಧ್ವಜ ಇವುಗಳಿಗೆ ಹೊಣೆ ಯಾರು, ಈ ಅಪಸಾವ್ಯಗಳಿಗೆ ಶಿಕ್ಷೆ ಯಾರಿಗೆ ಬಿಜೆಪಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.








