ಒಳ ಜಗಳದಿಂದ ಬಿಜೆಪಿ ಸರ್ಕಾರ ಪತನ.. ಆರು ತಿಂಗಳಲ್ಲಿ ಚುನಾವಣೆ

1 min read
bs yeddyurappa

ಒಳ ಜಗಳದಿಂದ ಬಿಜೆಪಿ ಸರ್ಕಾರ ಪತನ.. ಆರು ತಿಂಗಳಲ್ಲಿ ಚುನಾವಣೆ

ಶಿವಮೊಗ್ಗ : ಒಳ ಜಗಳದಿಂದ ಬಿಜೆಪಿ ಸರ್ಕಾರ ಪತನವಾಗಲಿದ್ದು, ಇನ್ನು ಆರು ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಭವಿಷ್ಯ ನುಡಿದಿದ್ದಾರೆ.

ಭದ್ರಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಇದು ಕೇವಲ 6 ತಿಂಗಳ ಸರ್ಕಾರ, ಇನ್ನು 6 ತಿಂಗಳಲ್ಲಿ ಸರ್ಕಾರ ಪತನವಾಗಲಿದೆ.

ಬಿಜೆಪಿಯವರಿಗೆ ಜನರ ಬಗ್ಗೆ ಕಾಳಜಿ ಇಲ್ಲ, ಅವರು ಹಣ ಮಾಡುವುದಕ್ಕಾಗಿಯೇ ಅಧಿಕಾರದಲ್ಲಿದ್ದಾರೆ.

ಬಿಜೆಪಿ ಶಾಸಕರಲ್ಲಿ ಈಗಾಗಲೇ ಒಳ ಜಗಳ ಆರಂಭವಾಗಿದ್ದು, 2022ರಲ್ಲಿ ಚುನಾವಣೆ ಎದುರಾಗಬಹುದು ಎಂದು ಅಭಿಪ್ರಾಯಪಟ್ಟರು.

BJP

ಪೆಟ್ರೋಲ್ ದರ ನೂರು ರೂಪಾಯಿ ದಾಟಿದೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಜನರು ಬಿಜೆಪಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ.

ಈ ಬಿಜೆಪಿಯವರಿಗೆ ಅಧಿಕಾರ ನಡೆಸಿ ಅನುಭವ ಇಲ್ಲ, ಅನುಭವದ ಕೊರತೆ ಇದೆ. ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ.

ಅವರ ಧರ್ಮದ ರಾಜಕಾರಣ ಈಗಾಗಲೇ ಜನರಿಗೆ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರಗಳು ಪತನವಾಗಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕ ಬಿ.ಕೆ.ಸಂಗಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd