ದೇಶವಾಸಿಗಳಿಗೆ ಬಿಜೆಪಿ ಸರ್ಕಾರದ ‘ದೀಪಾವಳಿ ಆಫರ್’

1 min read
Siddaramaiah saaksha tv

ದೇಶವಾಸಿಗಳಿಗೆ ಬಿಜೆಪಿ ಸರ್ಕಾರದ ‘ದೀಪಾವಳಿ ಆಫರ್’

ಬೆಂಗಳೂರು : ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಪೆಟ್ರೋಲ್ – 120 ರೂ. ಡೀಸೆಲ್ – 100 ರೂ. ವಾಣಿಜ್ಯ ಸಿಲಿಂಡರ್ – 2000 ರೂ. ದಿನಬಳಕೆ ಸಿಲಿಂಡರ್ – 950 ರೂ. ಬೇಳೆ, ಕಾಳು, ತರಕಾರಿ ಇತ್ಯಾದಿ 100 ರೂ. ಇಷ್ಟೆಲ್ಲ ಕೊಡುಗೆ ನೀಡಿದ ನರೇಂದ್ರ ಮೋದಿಯವರಿಗಾಗಿ ಬಿಜೆಪಿ #ಥ್ಯಾಂಕ್ಯು ಮೋದಿಜೀ ಎಂಬ ಅಭಿಯಾನ ನಡೆಸುವುದಿಲ್ಲವೇ?

ಲಾಕ್‍ಡೌನ್ ನಂತರದ ಬೆಲೆ ಏರಿಕೆಯಿಂದ ದೇಶದ ಆರ್ಥಿಕತೆ, ಜನರ ಬದುಕು ಮೂರಾಬಟ್ಟೆಯಾಗಿದ್ದು ಕಣ್ಣ ಮುಂದಿದೆ. ಹೀಗಿದ್ದೂ ಬಿಜೆಪಿಗರು ಬೆಲೆ ಏರಿಕೆಯಿಂದ ಜನತೆಗೆ ಸಮಸ್ಯೆ ಇಲ್ಲ ಎಂದು ಉಡಾಫೆ ಮಾತನಾಡುತ್ತಿರುವುದು ನಾಚಿಕೆಗೇಡು. ಬಡ ಬೀದಿ ವ್ಯಾಪಾರಿಗಳ, ಬಡ ಗ್ರಾಹಕರು ಮದ್ಯಮವರ್ಗದವರ ಈ ಬವಣೆಯೇ ದೇಶದ ಆರ್ಥಿಕ ದುರ್ಗತಿಗೆ ಹಿಡಿದ ಕನ್ನಡಿ.

BJP saaksha tv

ಕೋವಿಡ್‍ನಿಂದ ದೇಶದ ಜನರನ್ನು ರಕ್ಷಿಸಲಾಗದ ಸರ್ಕಾರದ ವೈಫಲ್ಯ ಲಕ್ಷಾಂತರ ಜನರ ದಾರುಣ ಸಾವಿಗೆ ಕಾರಣವಾಯಿತು. ಅವೈಜ್ಞಾನಿಕ ಲಾಕ್‍ಡೌನ್, ಸಿಗದ ನಷ್ಟ ಪರಿಹಾರ, ಉದ್ಯೋಗ ನಷ್ಟ, ಬೆಲೆಏರಿಕೆ, ಆರ್ಥಿಕ ಸಂಕಷ್ಟದಿಂದ ಆಘಾತ, ಖಿನ್ನತೆಗೊಳಗಾದ ಜನ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಜನರ ಜೀವ, ಜೀವನದ ಕನಿಷ್ಟ ಕಾಳಜಿಯೂ ಈ ಬಿಜೆಪಿ ಸರ್ಕಾರಗಳಿಗಿಲ್ಲ ಎಂದು ಕಿಡಿಕಾರಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd