BJP Karnataka : ಕೊಪ್ಪಳದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ಬಿಜೆಪಿ – BJP ಭವನಗಳ ಉದ್ಘಾಟನೆ..
ವಿಧಾನಸಭಾ ಚುನಾವಣೆಗೂ ಮುನ್ನ ಶಕ್ತಿಪ್ರದರ್ಶನಕ್ಕೆ ಮುಂದಾಗಿರುವ ಬಿಜೆಪಿ ಕೊಪ್ಪಳದಲ್ಲಿಂದು ಬೃಹತ್ ಸಮಾವೇಶವನ್ನ ಹಮ್ಮಿಕೊಂಡಿದೆ.
ಕೊಪ್ಪಳ ಸೇರಿ 10 ಬಿಜೆಪಿ ಭವನಗಳ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಆಗಮಿಸುತ್ತಿದ್ದಾರೆ. ಇದರ ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ ಕುಮಾರ ಕಟೀಲ ಸೇರಿದಂತೆ ಸಚಿವರು,ಶಾಸಕರು,ಸಂಸದರು ಆಗಮಿಸುತ್ತಿದ್ದಾರೆ.
ಬಿಜೆಪಿ ಭವನಗಳ ಉದ್ಘಾಟನೆ ನಂತರ ಕೊಪ್ಪಳದ ತಾಲೂಕಾ ಕ್ರೀಡಾಂಗಣದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಸುಮಾರು 50 ಸಾವಿರ ಜನ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಸಿಎಂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಆಗಮನದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಆಯೋಜಿಸಲಾಸಲಾಗಿದೆ. ಎಸ್ಪಿ. 3 ಜನ ಡಿವಾಎಸ್ಪಿ ಸೇರಿ 600 ಜನ ಸಿಬ್ಬಂದಿ ನಿಯೋಜಿಸಲಾಗಿದೆ.
ಬಿಜೆಪಿ ಭವನಗಳು ಉದ್ಘಾಟನೆಯ ಹಿನ್ನೆಲೆಯಲ್ಲಿ ಬುಧವಾರ ಸಂಜೆಯಿಂದಲೇ ಕಾರ್ಯಕರ್ತರೊಂದಿಗೆ ಹೋಮ ಹವನ ಆಚರಿಸಲಾಗುತ್ತಿದೆ. ಇಂದು ನಡೆಯುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬ್ಯಾನರ್, ಬಂಟಿಂಗ್ ಗಳು ರಾರಾಜಿಸುತ್ತಿವೆ.
BJP Karnataka: BJP ready to show strength in Koppal – Inauguration of BJP Bhavans..








