ಮದ್ದೂರು ಪಟ್ಟಣದಲ್ಲಿ ಇಂದು ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿರುವ ವೇಳೆ, ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ನೀಡಿದ ಬಗ್ಗೆ ಸಚಿವ ಸಂತೋಷ ಲಾಡ್ ಅವರು ತೀವ್ರ ಟೀಕೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಲಾಡ್,ಯಾವ ಬಿಜೆಪಿ ನಾಯಕರು ಮಕ್ಕಳು ಪ್ರತಿಭಟನೆಗೆ ಬಂದಿದ್ದಾರೆ? ಹಿಂದು–ಮುಸ್ಲಿಂ ಗಲಾಟೆ ಬಿಟ್ಟು ಬಿಜೆಪಿ ಬೇರೆ ಏನು ಮಾಡುತ್ತಿಲ್ಲ. ಜನರ ನಡುವೆ ಜಗಳ ಸೃಷ್ಟಿಸುವುದೇ ಇವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.ಕಲ್ಲುತೂರಾಟ ಮಾಡಿದವರಿಗೆ ಕಾನೂನಿನ ಅಡಿ ಶಿಕ್ಷೆ ಆಗಬೇಕು. ಯಾರೇ ಆಗಿರಲಿ, ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಅದೇ ವೇಳೆ, ಶಕ್ತಿಪೀಠಗಳ ಅಭಿವೃದ್ಧಿ ವಿಷಯವನ್ನು ನೆನಪಿಸಿ, ರಾಜ್ಯದಲ್ಲಿ ಶಕ್ತಿಪೀಠಗಳನ್ನು ಹೆಚ್ಚಾಗಿ ನಿರ್ಮಾಣ ಮಾಡಿರುವುದು ನಮ್ಮ ಸರ್ಕಾರ. ಆದರೆ ಬಿಜೆಪಿ ಜನರನ್ನು ಭ್ರಾಂತರನ್ನಾಗಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರು ಘಟನೆ ಹಿನ್ನೆಲೆಯಲ್ಲಿ, ಬಿಜೆಪಿ–ಕಾಂಗ್ರೆಸ್ ನಾಯಕರು ಪರಸ್ಪರ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿರುವುದರಿಂದ ರಾಜಕೀಯ ವಾತಾವರಣ ಮತ್ತಷ್ಟು ಬಿಸಿಯಾಗಿದೆ.






