ಬಿಜೆಪಿಗೆ ಹರಿದುಬಂದ ದೇಣಿಗೆ ಮೊತ್ತದಲ್ಲಿ 2019-20ರಲ್ಲಿ ಶೇಕಡಾ 6ರಷ್ಟು ಏರಿಕೆ.!
ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಹರಿದುಬರುತ್ತಿರುವ ದೇಣಿಗೆಯಲ್ಲಿ, 2019-20ರ ವಿತ್ತೀಯ ವರ್ಷದಲ್ಲಿ 6% ಪ್ರತಿಶತ ಹೆಚ್ಚಳವಾಗಿದೆ ಎನ್ನಲಾಗಿದೆ.. ತಲಾ 20,000ಕ್ಕಿಂತ ಹೆಚ್ಚಿನ ಮೊತ್ತ ಕೊಟ್ಟವರಿಂದಲೇ ಪಕ್ಷದ ಬೊಕ್ಕಸಕ್ಕೆ 785.77 ಕೋಟಿ ರೂ.ಗಳು ಸಂದಾಯವಾಗಿದೆ. 2018-19ರಲ್ಲಿ ಹರಿದುಬಂದಿದ್ದ 741.99 ಕೋಟಿ ರೂ.ಗಳಿಗಿಂತ ಇದು 6% ಹೆಚ್ಚಾಗಿದೆ.
2019-20ರಲ್ಲಿ ಬಿಜೆಪಿಗೆ ಹರಿದುಬಂದ ಈ ದೇಣಿಗೆಯು ಕಾಂಗ್ರೆಸ್ ಸಿಕ್ಕ ದೇಣಿಗೆಯ 465%ರಷ್ಟಿದೆ. ಇದೇ ವರ್ಷದಲ್ಲಿ ಕಾಂಗ್ರೆಸ್ಗೆ ಬಂದ ದೇಣಿಗೆಯು 146.78 ಕೋಟಿ ರೂ.ಗಳಷ್ಟಿತ್ತು. 2018-19ರಲ್ಲಿ 139.01 ಕೋಟಿ ರೂ.ಗಳ ಕೊಡುಗೆ ಬಂದಿತ್ತು. ಬಿಜೆಪಿ ಚುನಾವಣಾ ಟ್ರಸ್ಟ್ಗಳ ಮುಖಾಂತರ ಬಂದ ದೇಣಿಗೆಯು 323.82 ಕೋಟಿ ರೂ.ಗಳಷ್ಟಿದ್ದು, ಇದರ ಪೈಕಿ 217.75 ಕೋಟಿ ರೂ.ಗಳು ಪ್ರುಡೆಂಟ್ ಚುನಾವಣಾ ಟ್ರಸ್ಟ್ನಿಂದಲೇ ಬಂದಿದೆ.
45.95 ಕೋಟಿ ರೂ.ಗಳು ಜನಕಲ್ಯಾಣ ಚುನಾವಣಾ ಟ್ರಸ್ಟ್, 30 ಕೋಟಿ ರೂ.ಗಳು ಯೂ ಡೆಮಾಕ್ರಾಟಿಕ್ ಚುನಾವಣಾ ಟ್ರಸ್ಟ್, 9 ಕೋಟಿ ರೂ.ಗಳು ಎಬಿ ಚುನಾವಣಾ ಟ್ರಸ್ಟ್, 3.75 ಕೋಟಿ ರೂ.ಗಳು ಸಮಾಜ್ ಟ್ರಸ್ಟ, 10.12 ಕೋಟಿ ರೂ.ಗಳು ಟ್ರಯಂಫ್ ಟ್ರಸ್ಟ್, ಹಾರ್ಮೋನಿ ಟ್ರಸ್ಟ್ನಿಂದ 5.25 ಕೋಟಿ ರೂ.ಗಳು ಹಾಗೂ ಜನಹಿತ ಟ್ರಸ್ಟ್ನಿಂದ 2 ಕೋಟಿ ರೂ.ಗಳು ಪಕ್ಷದ ಬೊಕ್ಕಸ ಸೇರಿವೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.