ಬಾದಾಮಿ ಕ್ಷೇತ್ರ ನೀರಲ್ಲಿ ಮುಳುಗಿದಾಗ ಕಣ್ಣು ನೋವಿನ ಅಡ್ಡಿ ಹೇಳಿದ್ಯಾರು : ಬಿಜೆಪಿ
ಬೆಂಗಳೂರು : ಬಾದಾಮಿ ಮತ ಕ್ಷೇತ್ರ ನೀರಲ್ಲಿ ಮುಳುಗಿದಾಗ ನಿಮ್ಮನ್ನು ಗೆಲ್ಲಿಸಿದ ಕ್ಷೇತ್ರಕ್ಕೆ ಭೇಟಿ ನೀಡಲು ಕಣ್ಣು ನೋವಿನ ಅಡ್ಡಿ ಹೇಳಿದ್ದು ಮರೆತು ಹೋಯಿತೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ರಾಜ್ಯ ಬಿಜೆಪಿ ಕುಟುಕಿದೆ.
ಜನಸ್ವರಾಜ್ ಯಾತ್ರೆ ವಿಚಾರವಾಗಿ ಸಿದ್ದರಾಮಯ್ಯ, ಮಳೆ-ನೆರೆಗೆ ಸಿಕ್ಕಿ 20ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ.
ಹತ್ತು ಸಾವಿರ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಮನೆ ಬಿದ್ದು ಜನ ಬೀದಿಪಾಲಾಗಿದ್ದಾರೆ.
ಇವರ ನೆರವಿಗೆ ಧಾವಿಸಬೇಕಾದ ಬಿಜೆಪಿ ಸರ್ಕಾರ ಜನಸ್ವರಾಜ್ ಎಂಬ ನಾಟಕ ಮಾಡುತ್ತಾ ತಿರುಗಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದರು.
ಇದಕ್ಕೆ ಟ್ವಿಟ್ಟರ್ ನಲ್ಲಿ ಟಾಂಗ್ ನೀಡಿರುವ ಬಿಜೆಪಿ, ಮಾನ್ಯ ಸಿದ್ದರಾಮಯ್ಯ ಅವರೇ, ಬಾದಾಮಿ ಮತ ಕ್ಷೇತ್ರ ನೀರಲ್ಲಿ ಮುಳುಗಿದಾಗ ನಿಮ್ಮನ್ನು ಗೆಲ್ಲಿಸಿದ ಕ್ಷೇತ್ರಕ್ಕೆ ಭೇಟಿ ನೀಡಲು ಕಣ್ಣು ನೋವಿನ ಅಡ್ಡಿ ಹೇಳಿದ್ದು ಮರೆತು ಹೋಯಿತೇ ಎಂದು ಪ್ರಶ್ನಿಸಿದೆ.
ಅಲ್ಲದೆ ಸರ್ಕಾರಕ್ಕೆ ಕರ್ತವ್ಯದ ಬಗ್ಗೆ ಪಾಠ ಮಾಡುವ ಸಿದ್ದರಾಮಯ್ಯ ಅವರು ಮಾಡಿದ್ದೇನು?
ನೆರೆ ಪೀಡಿತವಾಗಿದ್ದ ಬಾದಾಮಿ ಮತಕ್ಷೇತ್ರಕ್ಕೆ ತೆರಳಲು ಕಣ್ಣು ನೋವಿನ ಕಾರಣ ಹೇಳಿದ್ದ ಸಿದ್ದರಾಮಯ್ಯ, ಅದೇ ವೇಳೆ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಎದುರು ಕೈಕಟ್ಟಿ ಕುಳಿತುಕೊಂಡಿದ್ದರು.
ಆಗ ಎಲ್ಲಿ ಹೋಗಿತ್ತು ನಿಮ್ಮ ಕರ್ತವ್ಯ ನಿಷ್ಠೆ ಎಂದು ಕುಟುಕಿದೆ.