ಹಾಸನ : ಅರಕಲಗೂಡು (Arakalagudu) ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಬೆಳವಣಿಗೆಯೊಂದು ನಡೆದಿದ್ದು, ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ (BJP) ಹೈಕಮಾಂಡ್ ಬಿ ಮತ್ತು ಸಿ ಫಾರಂಗಳನ್ನು ನೀಡಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ (Congress) ಪಕ್ಷದ ಟಿಕೆಟ್ ವಂಚಿತ ಎಂ.ಟಿ.ಕೃಷ್ಣೇಗೌಡ ಅವರಿಗೆ (MT Krishnegowda) ಬಿ ಮತ್ತು ಸಿ ಫಾರಂ ನೀಡಲಾಗಿದೆ. ಈಗಾಗಲೇ ಬಿಜೆಪಿಯಿಂದ ಎಚ್.ಯೋಗಾರಮೇಶ್ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಅವರು ಉಮೇದುವಾರಿಕೆ ಸಲ್ಲಿಸಿದ್ದದ್ದರು. ಆದರೆ, ಎಂ.ಟಿ.ಕೃಷ್ಣೇಗೌಡಗೆ ಬಿಜೆಪಿ ಬಿ, ಸಿ ಫಾರಂ ನೀಡಿದ್ದು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಆಗಲಿದ್ದಾರಾ ಎಂಬ ಅನುಮಾನ ಸದ್ಯ ವ್ಯಕ್ತವಾಗುತ್ತಿದೆ.
ಇಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಎಚ್. ಯೋಗಾರಮೇಶ್ ನಾಮಪತ್ರ ತಿರಸ್ಕೃತವಾದರೆ ಎಂ.ಟಿ ಕೃಷ್ಣೇಗೌಡ ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಹಿಂದೆ ಎ.ಟಿ.ರಾಮಸ್ವಾಮಿ (AT Ramaswamy) ಜೆಡಿಎಸ್ನಲ್ಲಿದ್ದಾಗ ಅವರ ಬಲಗೈ ಬಂಟರಂತಿದ್ದ ಕೃಷ್ಣೇಗೌಡ ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ಟಿಕೆಟ್ಗಾಗಿ ಹೋರಾಟ ನಡೆಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಸಿದ್ದರಾಮಯ್ಯ ಆಪ್ತನಿಗೆ ಟಿಕೆಟ್ ನೀಡದೆ ಡಿಕೆಶಿ ಆಪ್ತ ಶ್ರೀಧರ್ಗೌಡಗೆ ಟಿಕೆಟ್ ಸಿಕ್ಕಿತ್ತು..
ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಎ.ಟಿ.ರಾ ಮಸ್ವಾಮಿ ಅವರಿಗೂ ಟಿಕೆಟ್ ಕೊಡದೇ ಯೋಗಾರಮೇಶ್ಗೆ ಬಿಜೆಪಿ ಟಿಕೆಟ್ ನೀಡಿತ್ತು. ತಮ್ಮ ನಾಲ್ಕು ದಶಕದ ಎದುರಾಳಿ ಎ.ಮಂಜು ಮಣಿಸಲು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಹೊಸ ದಾಳ ಉರುಳಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ.