ಭೋಪಾಲ್: ಪಂಚ ರಾಜ್ಯಗಳಿಗೆ ಚುನಾವಣೆ ಜರುಗಿದ್ದು, ಇಂದು ನಾಲ್ಕು ರಾಜ್ಯಗಳ ಫಲಿತಾಂಶ ಹೊರಬೀಳುತ್ತಿದೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ.
ಸದ್ಯದ ಮಾಹಿತಿಯಂತೆ ಬಿಜೆಪಿ 126, ಕಾಂಗ್ರೆಸ್ 89 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಒಂದು ಕ್ಷೇತ್ರದಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. ಸಮೀಕ್ಷೆಯಂತೆ ಕೂಡ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಪೈಟ್ ಇರಲಿದೆ ಎಂದು ಹೇಳಲಾಗಿತ್ತು. ಅದರಂತೆ ಎರಡೂ ಪಕ್ಷಗಳ ಮಧ್ಯೆ ಬಿಗ್ ಫೈಟ್ ಶುರುವಾಗಿದೆ.
ಈ ರಾಜ್ಯದಲ್ಲಿ ಒಟ್ಟು 230 ಸ್ಥಾನಗಳಿದ್ದು ಬಹುಮತಕ್ಕೆ 116 ಸ್ಥಾನ ಅಗತ್ಯವಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಬಿಎಸ್ಪಿ 2, ಸಮಾಜವಾದಿ ಪಕ್ಷ 1 ಸ್ಥಾನ ಗೆದ್ದಿದ್ದವು. ಈ ವೇಳೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು.