BJP Vs Cong : ಜನ ನಮ್ಮನ್ನ ನೋಡಿ ನಗುತ್ತಿದ್ದಾರೆ – ಉಪರಾಷ್ಟ್ರಪತಿ ದಂಖರ್…
ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯಿಂದಾಗಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದದಿಂದಾಗಿ ಕಲಾಪ ಬಲಿಯಾಗಿದ್ದಕ್ಕೆ ಉಪರಾಷ್ಟ್ರಪತಿ ಮತ್ತು ರಾಜ್ಯ ಸಭಾಪತಿಗಳಾದ ಜಗದೀಪ್ ದಂಖರ್ ಅವರು ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ.
ಒಬ್ಬರ ಮಾತನ್ನ ಇನ್ನೊಬ್ಬರು ಕೇಳುವ ತಾಳ್ಮೆ ಇಲ್ಲದ ಕಾರಣ 135 ಕೋಟಿ ಜನ ನಮ್ಮಮ್ಮ ನೋಡಿ ನಗುತ್ತಿದ್ದಾರೆ ಎಂದು ಸಿಟ್ಟಾಗಿದ್ದಾರೆ. ಎಲ್ಲಾ ಸದಸ್ಯರು ಸದನದ ಸಂಪ್ರದಾಯಗಳನ್ನು ಅನುಸರಿಸಿ ಸದನದ ಗೌರವವನ್ನು ಕಾಪಾಡುವಂತೆ c
ಸೋಮವಾರ ರಾಜಸ್ಥಾನದ ಅಲ್ವಾರ್ನಲ್ಲಿ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ನಡೆದ ರ್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಅನೇಕ ತ್ಯಾಗಗಳನ್ನು ಮಾಡಿದ್ದು, ಬಿಜೆಪಿ ಒಂದು ನಾಯಿಯನ್ನೂ ಕಳೆದುಕೊಂಡಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಮಂಗಳವಾರ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ಈ ಹಿನ್ನೆಲೆಯಲ್ಲಿ ಜಗದೀಪ್ ಧನಕರ್ ತೀವ್ರ ನಿರಾಸೆ ಹಾಗೂ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಸದನದ ಶಿಷ್ಟಾಚಾರ ಪಾಲಿಸುವಂತೆ ಸೂಚಿಸಿದರು. ಎರಡೂ ಕಡೆಯವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಈ ಸಭೆ ಉತ್ತಮ ವೇದಿಕೆಯಾಗಿದೆ. ಈ ಸಭೆಯು ಹೊರಗೆ ನಡೆಯುವ ಎಲ್ಲವನ್ನೂ ಗುರುತಿಸಿ ಪ್ರತಿಬಿಂಬಿಸಬೇಕು ಎಂದರು.
BJP Vs Cong: People are laughing at us – Vice President Dankhar…