BJP vs Congress | ಭ್ರಷ್ಟಾಚಾರ ಹಾಗೂ ಬಿಜೆಪಿ, ರಕ್ತಸಂಬಂಧಿಗಳು
ಬೆಂಗಳೂರು : ಭ್ರಷ್ಟಾಚಾರ ಹಾಗೂ ಬಿಜೆಪಿ, ರಕ್ತಸಂಬಂಧಿಗಳು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಪಿಎಸ್ಐ ನೇಮಕ ಹಗರಣದ ಸಂಬಂಧ ಟ್ವಿಟ್ಟರ್ ನಲ್ಲಿ ಬಿಜೆಪಿ – ಕಾಂಗ್ರೆಸ್ ಕಚ್ಚಾಡುತ್ತಿವೆ.
ಇದರ ಮುಂದುವರೆದ ಭಾಗವಾಗಿ ಇದೀಗ ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದು, ಭ್ರಷ್ಟಾಚಾರ ಹಾಗೂ ಬಿಜೆಪಿ, ರಕ್ತಸಂಬಂಧಿಗಳು! ಹಾಗಾಗಿಯೇ ಪ್ರತಿ ಇಲಾಖೆಯಲ್ಲೂ ಅಕ್ರಮ, ಲೂಟಿ. PSI ಪರೀಕ್ಷೆಯ ನಂತರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ, ಈವರೆಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಅವರು ಮೌನ ವ್ರತಕ್ಕೆ ಜಾರಿರುವುದೇಕೆ?! ಈ ಅಕ್ರಮದ ಬಗ್ಗೆ ಮಾತಾಡಲು ಭಯವೇಕೆ ಎಂದು ಪ್ರಶ್ನಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದಲ್ಲಿ ಕೇವಲ ಒಬ್ಬರ ಬಂಧನವಾಗಿದೆ, ಈ ಅಕ್ರಮ ಒಬ್ಬರಿಂದಾಗಿದ್ದಲ್ಲ, ವ್ಯವಸ್ಥಿತ ಜಾಲವೇ ಇದರಲ್ಲಿದೆ.@drashwathcn ಅವರು ಏಕೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ? ಏಕೆ ಮಾತಾಡುತ್ತಿಲ್ಲ?
'ಕಳ್ಳರು ಮೌನವಾಗಿರುತ್ತಾರೆ' ಎಂಬ ಮಾತಿನಂತೆ ವರ್ತಿಸುತ್ತಿರುವುದೇಕೆ?
— Karnataka Congress (@INCKarnataka) April 26, 2022
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದಲ್ಲಿ ಕೇವಲ ಒಬ್ಬರ ಬಂಧನವಾಗಿದೆ, ಈ ಅಕ್ರಮ ಒಬ್ಬರಿಂದಾಗಿದ್ದಲ್ಲ, ವ್ಯವಸ್ಥಿತ ಜಾಲವೇ ಇದರಲ್ಲಿದೆ. ಡಾ. ಅಶ್ವಥ್ ನಾರಾಯಣ್ ಅವರು ಏಕೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ? ಏಕೆ ಮಾತಾಡುತ್ತಿಲ್ಲ? ‘ಕಳ್ಳರು ಮೌನವಾಗಿರುತ್ತಾರೆ’ ಎಂಬ ಮಾತಿನಂತೆ ವರ್ತಿಸುತ್ತಿರುವುದೇಕೆ ಎಂದು ಕಾಂಗ್ರೆಸ್ ಕುಟುಕಿದೆ. bjp-vs-congress-tweet war PSI recruitment scam