2023ಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ : ಬೊಮ್ಮಾಯಿ
ಬೆಂಗಳೂರು : 2022ರಲ್ಲಿ ಬಿಜೆಪಿ ಇರಲಿದೆ. ಮತ್ತೆ 2023ಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿದ ಅವರು, ಕಳೆದ ಬಾರಿಗಿಂತ ನಮಗೆ ದೊಡ್ಡ ಪ್ರಮಾಣದ ಯಶಸ್ವಿ ಸಿಕ್ಕಿದೆ.
ಈ ಭಾಗದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದರಿಂದ ನಮಗೆ ಸಾಧನೆ ಮಾಡಲಾಗಿರಲಿಲ್ಲ. ನಮ್ಮಕ್ಷೇತ್ರದಲ್ಲಿ ಯಾವತ್ತೂ ಕೂಡ ಗೆದ್ದಿರಲಿಲ್ಲ ಎಂದರು.
ಫಲಿತಾಂಶದಿಂದ ಬಿಜೆಪಿ ಬುಡ ಅಲುಗಾಡುತ್ತಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗೆ ಉತ್ತರಿಸಿದ ಬೊಮ್ಮಾಯಿ , ಕಾಂಗ್ರೆಸ್ ಗೆ ಬುಡವೇ ಇಲ್ಲ.
ಈಗಾಗಲೇ ಬುಡವೇ ಹೊರಟುಹೋಗಿದೆ. ಗ್ರಾಮ ಪಂಚಾಯತಿಯಲ್ಲಿ ನಾವು ಹೆಚ್ಚಿದ್ದೇವೆ. ಪಟ್ಟಣ ಪಂಚಾಯತಿಯಲ್ಲಿ ಈಗ ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದೇವೆ.
ಅಲ್ಪಸಂಖ್ಯಾತರಿರೋ ಯಾವುದೋ ಕಡೆ ನಗರ ಸಭೆಯಲ್ಲಿ ನಾಲ್ಕು ಸೀಟು ಹೆಚ್ಚು ಪಡೆದಿದ್ದಾರೆ.
ಅಷ್ಟಕ್ಕೆ ಗೆದ್ದಿದ್ದೇವೆ ಅಂತ ಬೀಗೋದು ಬೇಡ. ಬಿಜೆಪಿ 2022ರಲ್ಲೂ ಇರಲಿದೆ, 2023ಕ್ಕೂ ಮತ್ತೆ ಅಧಿಕಾರಕ್ಕೆ ಬರಲಿದೆ. ಮುಂದೆಯೂ ಅಧಿಕಾರವನ್ನ ನಡೆಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.