ಚಂಡೀಗಢ: 2029ರ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಎನ್ ಡಿಎ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿಯೇ (Narendra Modi) ಪ್ರಧಾನಿ ಆಗಲಿದ್ದಾಲೆ ಎಂದು ಕೇಂದ್ರ ಸಚಿವ ಅಮಿತ್ ಶಾ (Amit Shah) ಭವಿಷ್ಯ ನುಡಿದಿದ್ದಾರೆ.
ಮಣಿಮಜ್ರಾ ಪ್ರದೇಶದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ 24×7 ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, 2029ರಲ್ಲಿ ಮತ್ತೆ ಎನ್ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆ ಸಂದರ್ಭದಲ್ಲಿಯೂ ವಿಪಕ್ಷದಲ್ಲಿ ಕೂರಲು ಇಂಡಿಯಾ ಬಣ ತಯಾರಾಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರತಿಪಕ್ಷಗಳು ಏನು ಬೇಕಾದರೂ ಮಾಡಲಿ. 2029ರಲ್ಲಿ ದೇಶದಲ್ಲಿ ಮತ್ತೆ ಎನ್ಡಿಎ ಸರ್ಕಾರ ಬರಲಿದೆ. ಮತ್ತೆ ಮೋದಿಯೇ ಬರುತ್ತಾರೆಂದು ಅವರಿಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.