ಬ್ಲ್ಯಾಕ್ ಫಂಗಸ್ ಅಬ್ಬರ : 3,629 ಕೇಸ್ ಪತ್ತೆ, 334 ಜನ ಬಲಿ Black Fungus
ಬೆಂಗಳೂರು : ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಕೇಸ್ ಕಡಿಮೆಯಾಗುತ್ತಿದ್ದಂತೆ ಬ್ಲ್ಯಾಕ್ ಫಂಗಸ್ ಕೇಸ್ ಗಳು ಹೆಚ್ಚಾಗುತ್ತಿವೆ.
ಸದ್ಯ ರಾಜ್ಯದಲ್ಲಿ ಒಟ್ಟು 3,629 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿದ್ದು, ಕರಿಮಾರಿಗೆ 334 ಜನ ಬಲಿಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 1157 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿವೆ. ಜೊತೆಗೆ 110ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇದು ಸಿಲಿಕಾನ್ ಸಿಟಿಯ ಜನರ ಆತಂಖಕ್ಕೆ ಕಾರಣವಾಗಿದೆ.
ಬೆಂಗಳೂರಿನ 1157 ಕೇಸ್ ಗಳ ಪೈಕಿ 824 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಕ್ಟೋರಿಯಾದಲ್ಲಿ 108 ಕೇಸ್, ಬೌರಿಂಗ್ ಆಸ್ಪತ್ರೆ 388 ಕೇಸ್, ಕೆಸಿ ಜನರಲ್ 04 ಕೇಸ್, ಇಂದಿರಾಗಾಂಧಿ 3 ಕೇಸ್ ಪತ್ತೆಯಾಗಿದೆ.