BMTC Bus ಬೆಂಗಳೂರು: ಸಿಟಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗೆ ಬಾಲಕಿಯೊಬ್ಬಳು ಬಲಿಯಾದ ಘಟನೆ ಇಂದು ನಡೆದಿದೆ.
ಬೆಂಗಳೂರಿನ ಟಿ.ಸಿ. ಪಾಳ್ಯಯಿಂದ ಬಟ್ಟರಹಳ್ಳಿ ಹೋಗುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು ಪ್ರಿಯದರ್ಶಿನಿ ಎಂಬುವವರು ತಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಬಿಡಲು ಬೈಕ್ ಮೇಲೆ ಹೋಗುತ್ತಿದ್ದಾಗ ಈ ದುರಘಟನೆ ನಡೆದಿದೆ.
ಈ ವೇಳೆ ಪ್ರಿಯದರ್ಶಿನಿ (45) ಬೈಕ್ ಚಾಲನೆ ಮಾಡುತ್ತಿದ್ದು ಹಿಂದೆ ಅವರ ಇಬ್ಬರು ಮಕ್ಕಳಾದ ಲಾವ್ಯಾಶ್ರೀ(15) ಮತ್ತು ಯಾಶ್ವಿನ್ ಕೂಳಿತಿದ್ದರು.
ಭಟ್ಟರಹಳ್ಳಿ ಸಿಗ್ನಲ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ, ಬಿದ್ದ ಸಂದರ್ಭದಲ್ಲಿ ಎಡಗಡೆಗೆ ಬದಿಗೆ ತಾಯಿ ಪ್ರಿಯದರ್ಶಿನಿ ಮತ್ತು ಮಗ ಯಾಶ್ವಿನ್ ಬಿದ್ದಿದ್ದಾರೆ. ಆದರೆ ಲಾವ್ಯಶ್ರೀ ಬಲಗಡೆಗೆ ಬಿದ್ದಿದ್ದ ಕಾರಣ ಹಿಂದೆ ಯಿಂದ ಬಂದ BMTS ಬಸ್ ಬಾಲಕಿ ಮೇಲೆ ಹಾದುಹೊಗಿದೆ. ಘಟನೆಯಲ್ಲಿ ಲಾವ್ಯಶ್ರೀಯನ್ನು ತಕ್ಷಣ ಆಸ್ಪತ್ರೆಗೆ ಧಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಈ ಸಂದರ್ಭದಲ್ಲಿ ಯಾಶ್ವಿನ್ಗೆ ಗಂಭೀರ ಗಾಯವಾಗಿದ್ದು . ಪ್ರಿಯದರ್ಶಿನಿ ಹಾಗೂ ಯಾಶ್ವಿನ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರ್ಣ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ