ಲಾಲ್ ಸಿಂಗ್ ಛಡ್ಡಾ ಚಿತ್ರ ಹೊಗಳಿದವರನ್ನ ನಾನು ಇನ್ನೂ ನೋಡಿಲ್ಲ ಪ್ರಕಾಶ್ ಝಾ…
ಬಾಕ್ಸಾಫೀಸ್ನಲ್ಲಿ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರ ಸೋಲುವುದಕ್ಕೆ ಬಾಯ್ ಕಟ್ ಟ್ರೆಂಡ್ ಕಾರಣವಲ್ಲ ಎಂದು ಚಿತ್ರ ನಿರ್ಮಾಪಕ ಪ್ರಕಾಶ್ ಝಾ ತಿಳಿಸಿದ್ದಾರೆ. ಅಮೀರ್ ಚಿತ್ರಕ್ಕಾಗಿ ಶ್ರಮ ಪಟ್ಟಿರಬಹುದು ಆದರೆ ಚಿತ್ರದಲ್ಲಿ ಅಂತ ವಿಶೇಷ ಅಂಶವಿಲ್ಲ ಎಂದು ಹೇಳಿದ್ದಾರೆ.
ಪ್ರಕಾಶ್ ಝಾ ಸಧ್ಯಕ್ಕೆ ಅವರ ಮುಂಬರುವ ಚಿತ್ರ ಮತ್ತೋ ಕಿ ಸೈಕಿಲ್ ಚಿತ್ರಕ್ಕೆ ಪ್ರಚಾರ ಮಾಡುತ್ತಿದ್ದಾರೆ, ಇದರಲ್ಲಿ ಅವರು ಶೀರ್ಷಿಕೆ ಪಾತ್ರವನ್ ನಿರ್ವಹಿಸುತ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರ ಪ್ರಚಾರದ ಸಂದರ್ಭದಲ್ಲಿ ಲಾಲ್ ಸಿಂಗ್ ಚಡ್ಡಾ ಕುರಿತು ಮಾತನಾಡಿದ ಅವರು, “ಸೋಷಿಯಲ್ ಮೀಡಿಯಾದಲ್ಲಿ ಅಮೀರ್ ಖಾನ್ ಅವರ ಚಿತ್ರವನ್ನು ಬಹಿಷ್ಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. 2016 ರಲ್ಲಿ ಬಂದ ದಂಗಲ್ 2001 ರಲ್ಲಿ ಬಂದ ಲಗಾನ್ ಚಿತ್ರ ಚೆನ್ನಾಗಿ ಓಡದಿದ್ದರೆ ಅದು ಬಾಯ್ಕಟ್ ಕಾರಣದಿಂದ ಎಂದು ಹೇಳಬಹುದಿತ್ತು. ಆದರೆ ನೀವು ಅಂತಹ ಚಿತ್ರ ಮಾಡಿದ್ದೀರ. ಅಯ್ಯೋ ಇದು ಎಂಥಹ ಚಿತ್ರವಾಗಿತ್ತು ಎಂದು ಹೊಗಳುವ ಒಬ್ಬರು ನನಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಅಮೀರ್ಗೆ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡ ಅವರು, “ನೀವು ಕೆಲಸ ಮಾಡಿದ್ದೀರಿ ಮತ್ತು ಕಷ್ಟಪಟ್ಟು ಪ್ರಯತ್ನಿಸಿದ್ದೀರಿ ಎಂದು ನಾನು ಒಪ್ಪುತ್ತೇನೆ ಆದರೆ ನಿಮ್ಮ ಚಿತ್ರದಲ್ಲಿ ಅಂತಹ ಯಾವುದೇ ಅಂಶವಿಲ್ಲದಿದ್ದಾಗ, ಬಹಿಷ್ಕಾರದ ಕಾರಣ ಅದು ಚೆನ್ನಾಗಿ ಆಗಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ” ಎಂಬುದನ್ನ ಸೇರಿಸಿದ್ದಾರೆ.