ಬಾಲಿವುಡ್ ನ ಹಿರಿಯ ನಟ ಜಗದೀಪ್ ಇನ್ನಿಲ್ಲ
ಮುಂಬೈ, ಜುಲೈ 9: ಬಾಲಿವುಡ್ ನ ಹಿರಿಯ ನಟ ಜಗದೀಪ್ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಜಗದೀಪ್ ಅವರ ಮೂಲ ಹೆಸರು ಸಯ್ಯದ್ ಇಷ್ತಿಯಾಕ್ ಅಹ್ಮದ್ ಜಫ್ರಿ ಎಂದಾಗಿದ್ದರೂ ಅವರು ಜಗದೀಪ್ ಎಂಬ ಹೆಸರಿನಿಂದ ಖ್ಯಾತರಾಗಿದ್ದರು.
ಅಮಿತಾಬ್ ಬಚ್ಚನ್ ಅವರ ಶೋಲೆ’ ಚಿತ್ರದ ಸೂರ್ಯ ಭೋಪಾಲಿ ಪಾತ್ರದಿಂದ ಜಗದೀಪ್ ಹೆಚ್ಚು ಜನಪ್ರಿಯತೆ ಗಳಿಸಿದ್ದರು.
ಅಬ್ ದಿಲ್ಲಿ ಡೋರ್ ನಹಿನ್’, ಕೆ.ಎ.ಅಬ್ಬಾಸ್ ಅವರ ‘ಮುನ್ನಾ’, ಗುರು ದತ್ ಅವರ ‘ಆರ್ ಪಾರ್’, ಬಿಮಲ್ ರಾಯ್ ಅವರ ‘ದೋ ಬಿಘಾ ಜಮಿನ್’ ಮತ್ತು ಎವಿಎಂನ ‘ಹಮ್ ಪಾಂಚಿ ಏಕ್ ದಾಲ್ ಕೆ’ ಚಿತ್ರಗಳಲ್ಲಿ ನಟಸಿದ್ದ ಇವರು ತಮ್ಮ ಇಡೀ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಜಗದೀಪ್ ಅವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ.