ಬಾಲಿವುಡ್ ನ ‘ಕ್ವೀನ್’ ಕಂಗನಾಗೆ ಕೊರೊನಾ ಪಾಸಿಟಿವ್ ..!
ಬಾಲಿವುಡ್ ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ಗೆ ಕೋವಿಡ್ ಪಾಸಿಟಿವ್ ಇರುವುದು ಖಚಿತವಾಗಿದೆ. ಈ ವಿಚಾರವನ್ನು ಖುದ್ದು ಕಂಗನಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಮಾಹಿತಿ ನೀಡಿರುವ ಕಂಗನಾ ‘ಕಳೆದ 2 ದಿನಗಳಿಂದ ನನಗೆ ಕೋವಿಡ್ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆ ಪರೀಕ್ಷಿಸಿದೆ. ಬಳಿಕ ಪಾಸಿಟಿವ್ ಬಂದಿದೆ. ಈಗ ಹೋಮ್ ಕ್ವಾರಂಟೈನ್ ನಲ್ಲಿದ್ದೇನೆ’ ಎಂದು ತಿಳಿಸಿದ್ದಾರೆ.
ಇನ್ನೂ ಕೋವಿಡ್ ಪಾಸಿಟಿವ್ ಬರುವ ಮೊದಲು ಹಿಮಾಚಲ ಪ್ರದೇಶದಲ್ಲಿರುವ ತಮ್ಮ ನಿವಾಸಕ್ಕೆ ಹೋಗಲು ನಟಿ ಕಂಗನಾ ನಿರ್ಧರಿಸಿದ್ದರು. ಆದ್ರೆ ಪಾಸಿಟಿವ್ ಬಂದ ಕಾರಣ ಮುಂಬೈನಲ್ಲಿಯೇ ಉಳಿದಿದ್ದಾರೆ. ಇನ್ನೂ ಈಗಾಗಲೇ ಬಾಲಿವುಡ್ , ಟಾಲಿವುಡ್ , ಕಾಲಿವುಡ್ , ಸಸ್ಯಾಂಡಲ್ ವುಡ್ ನ ಅನೇಕ ತಾರೆಯರಿಗೇ ಕೋವಿಡ್ ಪಾಸಿಟಿವ್ ಬಂದಿದೆ. ಅಲ್ಲು ಅರ್ಜುನ್ , ಶಿಲ್ಪಾ ಶೆಟ್ಟಿ , ದೀಪಿಕಾ ಪಡುಕೋಣೆ ಸೇರಿದಂತೆ ಹಲವರು ಕ್ವಾರಂಟೈನ್ ನಲ್ಲಿದ್ದಾರೆ. ಇನ್ನೂ ಸೋನು ಸೂದ್, ಆಲಿಯಾ ಭಟ್, ಕಾರ್ತಿಕ್ ಆರ್ಯನ್, ಅಕ್ಷಯ್ ಕುಮಾರ್, ರಣ್ಬೀರ್ ಕಪೂರ್ ಸೇರಿದಂತೆ ಅನೇಕರು ಈಗಾಗಲೇ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ಧಾರೆ.