Boxing Championship : ವಿಶ್ವ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ಸವೀಟಿ ಬೂರಾ, ನಿತು ಘಂಘಸ್….
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್ ಗಳು ಒಂದೇ ದಿನದಲ್ಲಿ ಎರಡು ಚಿನ್ನದ ಪದಕ ಗೆಲ್ಲುವ ಮೂಲದ ಅದ್ವಿತೀಯ ಶಕ್ತಿ ಪ್ರದರ್ಶನವನ್ನ ನಡೆಸುತ್ತಿದ್ದಾರೆ. ಮೊದಲಿಗೆ 48 ಕೆಜಿ ವಿಭಾಗದಲ್ಲಿ ನೀತೂ ಗಂಗಾಸ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಫೈನಲ್ ಹಣಾಹಣಿಯಲ್ಲಿ ನೀತು ಮಂಗೋಲಿಯಾದ ಲುತ್ಸಾಯಿಖಾನ್ ಅವರನ್ನು 5-0 ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದರು.
ಆ ಬಳಿಕ ನಡೆದ ಪಂದ್ಯದಲ್ಲಿ 81 ಕೆಜಿ ವಿಭಾಗದಲ್ಲಿ ಸ್ವೀಟಿ ಬೂರಾ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಫೈನಲ್ ಪಂದ್ಯದಲ್ಲಿ ಸ್ವೀಟಿ ಚೀನಾದ ವಾಂಗ್ ಲೀನಾ ಅವರನ್ನ 4-3 ಅಂತರದಿಂದ ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿದರು. 2014 ರಲ್ಲಿ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದ ಸ್ವೀಟಿ ಇದೀಗ ಭಾರತದ ಮೇರಿ ಕೋಮ್, ಸರಿತಾ ದೇವಿ ಮತ್ತು ನಿಖತ್ ಝರೀನ್ ನಂತರ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಇವರ ಸಾಲಿಗೆ ನೀತೂ ಗಂಗಾಸ್ ಸಹ ಸೇರಿಕೊಂಡಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ನೀತು ಗಂಗಾಸ್ ತಾಯ್ನಾಡಿನಲ್ಲಿ ನಡೆದ ವಿಶ್ವಚಾಂಪಿಯನ್ಶಿಪ್ ನಲ್ಲಿ ಎದುರಾಳಿಯ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡ ನೀತು ಆಕ್ರಮಣಕಾರಿ ಆಟವಾಡಿದರು. ಪಂಚ್ ಗಳ ಸುರಿಮಳೆಗೈದ ನೀತು ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ 6 ನೇ ಭಾರತೀಯ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ.
ಈ ಹಿಂದೆ 2002, 2005, 2006, 2008, 2010, 2018ರಲ್ಲಿ ಮೇರಿ ಕೋಮ್ ಚಿನ್ನದ ಪದಕ ಗೆದ್ದಿದ್ದರು… 2006 ರಲ್ಲಿ ಸರಿತಾ ದೇವಿ, ಜೆನ್ನಿ ಆರ್‌ಎಲ್, ಲೇಖಾ ಕೆಸಿ, 2022ರಲ್ಲಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಿಖತ್ ಜರೀನ್ ಚಿನ್ನ ಗೆದ್ದಿದ್ದರು.
Boxing Championship: Sweety Boora, Nitu Ganghus who won gold in world boxing…